ಮೈಸೂರು : ಇಂದು ಜೆಕೆ ಟೈರ್ಸ್ ಕಂಪನಿಯ 67 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ಈ ಕಂಪನಿಯ ಸೋಂಕಿತರ ಸಂಖ್ಯೆ 107ಕ್ಕೇರಿದೆ.
ಜ್ಯುಬಿಲಿಯಂಟ್ ಕಾರ್ಖಾನೆಯ ನಂತರ ಜೆಕೆ ಟೈರ್ಸ್ ಕಂಪನಿಯ ನೌಕರರಿಗೆ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಮೊನ್ನೆ 40 ಮಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಕಂಪನಿಯ ಎಲ್ಲ ನೌಕರರನ್ನು ಗಂಟಲು ದ್ರವ ಪರೀಕ್ಷೆ ಮಾಡಿಸುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದ್ದರಿಂದ ಮೈಸೂರಿನಲ್ಲಿ ಎರಡು ಖಾಸಗಿ ಆಸ್ಪತ್ರೆಯಲ್ಲಿ ನೌಕರರ ಗಂಟಲು ಪರೀಕ್ಷೆ ಮಾಡಲಾಗುತ್ತಿದೆ.
ಕೊರೊನಾ ಸೋಂಕಿತರನ್ನ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ನೌಕರರ ಸಂಪರ್ಕದಲ್ಲಿದ್ದವರನ್ನ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ. ಎಲ್ಲ ನೌಕಕರ ಗಂಟಲು ದ್ರವ ಪರೀಕ್ಷೆ ಮುಗಿದು ವರದಿ ಬರುವವರೆಗೆ ಆಸ್ಪತ್ರೆ ಬಿಟ್ಟು ಕದಲದಂತೆ ವಾರ್ನಿಂಗ್ ಮಾಡಲಾಗಿದೆ.
ಜ್ಯುಬಿಲಿಯಂಟ್ ಕಾರ್ಖಾನೆಯ ಕೊರೊನಾ ಸೋಂಕಿನ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತಕ್ಕೆ ಈಗ ಮತ್ತೊಂದು ದೊಡ್ಡ ಸವಾಲು ಎದುರಾದಂತಾಗಿದೆ.