ಮೈಸೂರು: ಬ್ಯಾಂಕ್ ಮುಂದೆ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಗುಂಪುಗುಂಪಾಗಿ ನಿಂತು ಹಣ ಪಡೆಯುತ್ತಿದ್ದ ದೃಶ್ಯ ಎಚ್.ಡಿ.ಕೋಟೆ ಕಂಡುಬಂತು.
ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಿದ್ದು, ಯಾರೊಬ್ಬರೂ ಮನೆಯಿಂದ ಹೊರಬರದಂತೆ ಜಿಲ್ಲಾಡಳಿತ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದೆ. ಆದರೆ ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಜನರು ಲಾಕ್‌ಡೌನ್ ನಿಯಮ ಮೀರಿ ನಡೆದುಕೊಂಡರು.
ಪ್ರಧಾನಿ ನರೇಂದ್ರ ಮೋದಿ ಯೋಜನೆಯಡಿ ರೈತರ ಖಾತೆಗೆ 500 ರೂ. ಉಚಿತ ಗ್ಯಾಸ್ ಖರೀದಿಯ ಹಣ ಖಾತೆಗೆ ಜಮೆ ಆಗಿದೆ ಎಂದು ತಿಳಿದ ಜನರು ಹಣವನ್ನು ಪಡೆಯಲು ಬೆಳಿಗ್ಗೆ 6 ಗಂಟೆಯಿಂದಲೇ ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದರು.
ಈ ವೇಳೆ ಜನರ ಗುಂಪು ಕಂಡ ಪೊಲೀಸರು ನಿಯಂತ್ರಿಸಲು ಹರಸಾಹಸಪಟ್ಟರು.