ETV Bharat / city

ಕೆಆರ್​ಎಸ್ ಬಿರುಕಿನ ವಿಚಾರವಾಗಿ ರಂಪಾಟ ನಡೆಯುತ್ತಿದೆ, ಈ ಸರ್ಕಾರ ಸತ್ಹೋಗಿದೆಯಾ?: ಹೆಚ್.ವಿಶ್ವನಾಥ್ - ಕೆಆರ್​ಎಸ್ ಜಲಾಶಯ ಬಿರುಕು ವಿಚಾರ

ಸಂಸದೆ ಸುಮಲತಾ ಕೆಆರ್​ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿರುಕಿಲ್ಲ ಎಂದು ಹೇಳುತ್ತಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಹಾದಿ ಬೀದಿಯಲ್ಲಿ ನಡೆಯುತ್ತಿರುವ ಹೇಳಿಕೆ ಮತ್ತು ವಿರೋಧಿ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತಜ್ಞರ ಸಮಿತಿಯನ್ನು ನೇಮಿಸಿ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಬೇಕು..

H. Vishwanath
ಹೆಚ್.ವಿಶ್ವನಾಥ್
author img

By

Published : Jul 9, 2021, 2:24 PM IST

ಮೈಸೂರು : ಕೆಆರ್​ಎಸ್ ಬಿರುಕಿನ ವಿಚಾರ ಹಾದಿಬೀದಿಯಲ್ಲಿ ರಂಪಾಟ ನಡೆಯುತ್ತಿದೆ. ಸರ್ಕಾರ ಈ ಬಗ್ಗೆ ತಜ್ಞರ ಸಮಿತಿ ನೇಮಿಸುವುದನ್ನು ಬಿಟ್ಟು ಸುಮ್ಮನಿದೆ. ಈ ಸರ್ಕಾರ ಏನಾದರೂ ಸತ್ತು ಹೋಗಿದ್ದೀಯಾ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವವಿಖ್ಯಾತ ಕೆಆರ್​ಎಸ್ ಜಲಾಶಯ ಬಿರುಕು ವಿಚಾರ ಹಾದಿಬೀದಿ ರಂಪಾಟ ನಡೆಯುತ್ತಿರುವುದು ನೋವಿನ ವಿಚಾರ. ರಾಜರು ತಮ್ಮ ಮನೆಯ ಹೆಣ್ಣುಮಕ್ಕಳ ಚಿನ್ನ, ವಜ್ರ ಅಡವಿಟ್ಟು ಕಷ್ಟಪಟ್ಟು ಕಟ್ಟಿದ ಕೆಆರ್​ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂಬ ವಿಚಾರ ಜನರಲ್ಲಿ ಆತಂಕ ಉಂಟು ಮಾಡಿದೆ.

ಈಟಿವಿ ಭಾರತ ಜತೆಗೆ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಮಾತನಾಡಿರುವುದು..

ಸಂಸದೆ ಸುಮಲತಾ ಕೆಆರ್​ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿರುಕಿಲ್ಲ ಎಂದು ಹೇಳುತ್ತಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಹಾದಿ ಬೀದಿಯಲ್ಲಿ ನಡೆಯುತ್ತಿರುವ ಹೇಳಿಕೆ ಮತ್ತು ವಿರೋಧಿ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತಜ್ಞರ ಸಮಿತಿಯನ್ನು ನೇಮಿಸಿ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಬೇಕು.

ಆದರೆ, ಮುಖ್ಯಮಂತ್ರಿಗಳು ಏನು ಆಗಿಲ್ಲ ಎಂದು ಸುಮ್ಮನ್ನಿದ್ದಾರೆ. ಅದಕ್ಕೆ ನಾನು ರಾಜ್ಯದಲ್ಲಿ 3 ಪಕ್ಷಗಳ ಸರ್ಕಾರ ಇದೆ ಎಂದು ಹೇಳುವುದು ಎಂದು ತಮ್ಮ ಸರ್ಕಾರದ ವಿರುದ್ಧವೇ ವಿಶ್ವನಾಥ್ ವಾಗ್ದಾಳಿ ನಡೆಸಿದರು. ಈ ನಾಡಿನ ಶಕ್ತಿಸೌಧ ಕಳೆಗುಂದಿದೆ. ಪ್ರಭಾವಳಿ ಮಸುಕಾಗಿದೆ. ಕಣ್ಣು ಮತ್ತು ಕಿವಿ ಕೇಳಿಸುತ್ತಿಲ್ಲ ಎಂದು ತಮ್ಮ ಸಿಎಂ ಬಿಎಸ್‌ವೈ ವಿರುದ್ಧವೇ ಪರೋಕ್ಷವಾಗಿ ಹೆಚ್‌ ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಅಣೆಕಟ್ಟು ಬಿರುಕು ಬಿಟ್ಟಿದೆ ಎಂದು ಜನರಲ್ಲಿ ನಾವು ಆತಂಕ ಮೂಡಿಸಲ್ಲ.. ಸುಮಲತಾರಿಗೆ ಟಾಂಗ್‌ ಕೊಟ್ಟರಾ ಡಿಕೆಶಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.