ಮೈಸೂರು: ಕೊರೊನಾ ಸೋಂಕಿನಿಂದ ಒಂದು ವಾರದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕಾರ್ಪೋರೇಟರ್ ಸೋಮಶೇಖರ್ ನಿಧನರಾಗಿದ್ದಾರೆ.
ಚಾಮರಾಜ ಕ್ಷೇತ್ರ ಜೆಡಿಎಸ್ ಮುಖಂಡ ಸೋಮಶೇಖರ್ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಬೆಡ್-ಆಕ್ಸಿಜನ್ ಇಲ್ಲ: ಕೊರೊನಾ ರೋಗಿಗಳ ಗೋಳು ಕೇಳೋರಿಲ್ಲ! ವಿಡಿಯೋ
ಇನ್ನು ಮೈಸೂರಿನಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಳವಾಗುತ್ತಿರುವುದರಿಂದ ಸಾರ್ವಜನಿಕರು ಆತಂಕದಲ್ಲಿದ್ದಾರೆ.