ಮಂಡ್ಯ: ಕೆಆರ್‌ಎಸ್‌ನ ಬೃಂದಾವನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಅದರಲ್ಲೂ ದಸರಾ ಸಮಯದಲ್ಲಿ ಇನ್ನೂ ಹೆಚ್ಚು. ಹೀಗಾಗಿ ಕಾವೇರಿ ನೀರಾವರಿ ನಿಗಮ ಪ್ರವೇಶ ಶುಲ್ಕವನ್ನು ಹೆಚ್ಚು ಮಾಡಿದೆ.
ಪ್ರವೇಶ ಶುಲ್ಕದ ಜೊತೆಗೆ ಪಾರ್ಕಿಂಗ್ ಶುಲ್ಕ ಟೋಲ್ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದ್ದು, ಅಕ್ಟೋಬರ್ 1 ರಿಂದ ಹೊಸ ಶುಲ್ಕ ಅನ್ವಯ ಆಗಲಿದೆ. ಪ್ರವೇಶ ಶುಲ್ಕ 25 ರೂಪಾಯಿಂದ 50 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಮಕ್ಕಳಿಗೆ 10 ರೂಪಾಯಿ, ಶಾಲಾ ಮಕ್ಕಳಿಗೆ 5 ರೂಪಾಯಿ ಹಾಗೂ ಕ್ಯಾಮರಾಗೆ 100 ರೂಪಾಯಿ ಶುಲ್ಕ ನಿರ್ಧಾರ ಮಾಡಲಾಗಿದೆ.
ಇನ್ನು ವಾಹನ ಶುಲ್ಕವಾಗಿ ಕಾರಿಗೆ 50 ರೂ., ಮಿನಿ ಬಸ್‌ಗೆ 70 ರೂ. ಬಸ್‌ಗೆ 100 ರೂ. ದ್ವಿಚಕ್ರ ವಾಹನಕ್ಕೆ 10 ರೂ. ಹಾಗೂ ತ್ರಿಚಕ್ರ ವಾಹನಕ್ಕೆ 20 ರೂ. ನಿಗದಿ ಮಾಡಲಾಗಿದೆ. ಕೆಳ ಸೇತುವೆ ಶುಲ್ಕವಾಗಿ ಕಾರಿನವರು 50 ರೂ, ಮಿನಿ ಬಸ್‌ನವರು 70 ರೂಪಾಯಿ, ಬಸ್ 100 ರೂ, ತ್ರಿಚಕ್ರಕ್ಕೆ 20 ರೂ, ಲಾರಿಗೆ 150 ರಿಂದ 200 ವರೆಗೂ ಶುಲ್ಕ ನಿಗದಿ ಮಾಡಲಾಗಿದೆ.