ಮೈಸೂರು: ನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲೆಯ ಮಂಡಕಳ್ಳಿ ಗ್ರಾಮದ ಹೊರವಲಯದಲ್ಲಿ ಖಾಲಿ ಕೋಳಿ ಫಾರಂನಲ್ಲಿ ನಕಲಿ ರಸಗೊಬ್ಬರ ತಯಾರಿಕೆ ಘಟಕ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಮೈಸೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ಖಾಲಿ ಕೋಳಿಫಾರಂನಲ್ಲಿ ಅಸಲಿ ರಸಗೊಬ್ಬರ ಜೊತೆಗೆ ಜೇಡಿ ಮಣ್ಣಿನ ಕಾಳಿನ ಮಾದರಿಯ ಮಣ್ಣನ್ನು ಬೆರೆಸಿ ನಕಲಿ ರಸಗೊಬ್ಬರ ತಯಾರಿಕೆ ಮಾಡುತ್ತಿರುವುದು ಕಂಡು ಬಂದಿದೆ. ಸದ್ಯ ಗೊಬ್ಬರ ತಯಾರಿಕೆಯ ಪರಿಕರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನಕಲಿ ರಸಗೊಬ್ಬರ ತಯಾರಿಕಾ ಘಟಕ ನಡೆಸುತ್ತಿದ್ದ ಆರೋಪಿ ಮಹೇಶ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದಾವಣಗೆರೆ: ಚೂರಿ ಇರಿದು ತಮ್ಮನ ಕೊಂದ ಅಣ್ಣ ಪರಾರಿ