ಮೈಸೂರು: ನಟ ಪುನೀತ್ ರಾಜ್ಕುಮಾರ್(Actor puneeth rajkumar) ಅವರು ನಮ್ಮನ್ನಗಲಿದ್ದರೂ ಅವರ ನೆನಪು ಮತ್ತು ಸಾಮಾಜಿಕ ಸೇವೆಗಳು ಮಾತ್ರ ಮಾಸುತ್ತಿಲ್ಲ. ಇದರಿಂದಾಗಿ ಪುನೀತ್ ಅವರ ಜೀವನ-ಸಾಧನೆಯನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಅವರ ಅಭಿಮಾನಿಯೊಬ್ಬರು ಸರ್ಕಾರಕ್ಕೆ ಮನವಿ (A Fan pleased to state government) ಮಾಡಿದ್ದಲ್ಲದೇ ಸಹಿ ಸಂಗ್ರಹ ಅಭಿಯಾನವನ್ನೂ ಹಮ್ಮಿಕೊಂಡಿದ್ದಾರೆ.
ಮೈಸೂರಿನ ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಗ್ರಾಮದ ದೇವರಾಜ್ ಅರಸು ಎಂಬುವವರು ಪುನೀತ್ರ ಜೀವನ ಸಾಧನೆಯನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು. ನಟಸಾರ್ವಭೌಮನ ಸರಳತೆ, ಸ್ನೇಹ, ಆದರ್ಶ, ಸಾಮಾಜಿಕ ಸೇವೆಗಳು ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂಬ ಅಭಿಲಾಷೆ ಹೊಂದಿದ್ದಾರೆ. ಇದನ್ನು ಸಾಕಾರ ಮಾಡಬೇಕು ಎಂದು ಒತ್ತಾಯಿಸಿ, ಮೈಸೂರಿನಲ್ಲಿ ಸಹಿ ಸಂಗ್ರಹ ಮಾಡುತ್ತಿದ್ದಾರೆ.
ಇದನ್ನೂ ಓದಿ: ಪೇಜಾವರ ಶ್ರೀಗಳ ಕುರಿತು ವಿವಾದಾತ್ಮಕ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ ನಾದ ಬ್ರಹ್ಮ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೂ ಪತ್ರದ ಮೂಲಕ ತಮ್ಮ ಕೋರಿಕೆಯನ್ನು ಸಲ್ಲಿಸಿದ್ದಾರೆ.