ETV Bharat / city

ಬ್ರಿಟನ್‌ನಿಂದ ಮೈಸೂರಿಗೆ 137 ಜನರ ಆಗಮನ.. ಎಲ್ಲರ ಕೋವಿಡ್ ಪರೀಕ್ಷೆಗೆ ಕ್ರಮ - ಬ್ರಿಟನ್‌ನಿಂದ ಮೈಸೂರಿಗೆ 137 ಜನರ ಆಗಮನ

ಬ್ರಿಟನ್‌ನಿಂದ ಮೈಸೂರು ಜಿಲ್ಲೆಗೆ ಒಟ್ಟು 137 ಜನರು ಆಗಮಿಸಿದ್ದು, ವಾಪಸ್​ ಆದವರ ಕೋವಿಡ್ ಪರೀಕ್ಷೆಗೆ ಡಿಸೆಂಬರ್ 24ರಂದು ಮೈಸೂರಿನ ಟೌನ್‌ಹಾಲ್‌ನಲ್ಲಿ ಪ್ರತ್ಯೇಕವಾದ ಕೌಂಟರ್ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

137-people-arrival-from-britain-to-mysore
ಬ್ರಿಟನ್‌ನಿಂದ ಮೈಸೂರಿಗೆ 137 ಜನರ ಆಗಮನ..ಎಲ್ಲರ ಕೋವಿಡ್ ಪರೀಕ್ಷೆ ಕ್ರಮ
author img

By

Published : Dec 23, 2020, 7:46 PM IST

ಮೈಸೂರು: ರೂಪಾಂತರಗೊಂಡ ಕೋವಿಡ್ ವೈರಸ್ ಯುಕೆಯಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆ, ಮುನ್ನೆಚ್ಚರಿಕೆಯಾಗಿ ಮೈಸೂರು ಜಿಲ್ಲಾಡಳಿತ ಕಟ್ಟಿನ ಕ್ರಮಕ್ಕೆ ಮುಂದಾಗಿದೆ.

ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಡಿ.1 ರಿಂದ 20ರ ವರೆಗೆ 119 ಜನರು ಹಾಗೂ ಡಿ.21 ರಂದು 18 ಜನರು ಸೇರಿ ಒಟ್ಟು 137 ಜನರು ಬ್ರಿಟನ್‌ನಿಂದ ಮೈಸೂರಿಗೆ ಬಂದಿದ್ದಾರೆ.

ಡಿ. 21ರಂದು ವಾಪಸ್​ ಆದ ಎಲ್ಲ ಬ್ರಿಟನ್ ಪ್ರಯಾಣಿಕರಿಗೆ ಕೋವಿಡ್-19 ಪರೀಕ್ಷೆ ಆಗಿದೆ. ಡಿಸೆಂಬರ್ 21ರಂದು ಬಂದಿರುವ 18 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಡಿಸೆಂಬರ್ 20ಕ್ಕೂ ಮೊದಲು ಬಂದಿರುವ ಕೆಲವರಿಗೆ ಪರೀಕ್ಷೆಯಾಗಿದ್ದು, ಎಲ್ಲರೂ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಓದಿ: ಇಂದಿನ ಬದಲು ನಾಳೆಯಿಂದ ನೈಟ್ ಕರ್ಫ್ಯೂ ಜಾರಿ: ಸಮಯದಲ್ಲೂ ಬದಲಾವಣೆ ಮಾಡಿದ ಸರ್ಕಾರ..!

ಬ್ರಿಟನ್‌ನಿಂದ ವಾಪಸ್​ ಆದವರ ಕೋವಿಡ್ ಪರೀಕ್ಷೆಗೆ ಡಿಸೆಂಬರ್ 24ರಂದು ಮೈಸೂರಿನ ಟೌನ್‌ಹಾಲ್‌ನಲ್ಲಿ ಪ್ರತ್ಯೇಕವಾದ ಕೌಂಟರ್ ತೆರೆಯಲಾಗಿದೆ. ಬೆಳಗ್ಗೆ‌ 10 ಗಂಟೆಯಿಂದ‌ ಸಂಜೆ 4 ಗಂಟೆಯವರೆಗೆ ಕೌಂಟರ್ ತೆರೆದಿರುತ್ತದೆ. ವಾರ್ ರೂಂ ಮೂಲಕ ಅವರೆಲ್ಲರಿಗೂ ಮಾಹಿತಿ ನೀಡಲಾಗಿದೆ. ರೋಗ ಲಕ್ಷಣ ಇರುವವರು ಹಾಗೂ ಈ 137 ಜನರೊಂದಿಗೆ ಪ್ರಾಥಮಿಕ ಸಂಪರ್ಕ ಇದ್ದವರೂ ಕೂಡ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.