ETV Bharat / city

ಷಡ್ಯಂತ್ರದಿಂದ ಮಂಗಳೂರು ಹಿಂಸಾಚಾರ, ತನಿಖೆ ನಡೆಸಿ ಸೂಕ್ತ ಕ್ರಮ: ಸಿಎಂ ಬಿಎಸ್​ವೈ - ಮಂಗಳೂರು ಪೌರತ್ವ ಪ್ರತಿಭಟನೆ ಕುರಿತು ಬಿ ಎಸ್ ಯಡಿಯೂರಪ್ಪ ಹೇಳಿಕೆ ಸುದ್ದಿ

ಸ್ಟೇಷನ್‌ಗೆ ಬೆಂಕಿ ಹಚ್ಚಲು ಪ್ರಯತ್ನ ಪಟ್ಟವರನ್ನು ಮತ್ತು ಗಾಡಿಗಳಲ್ಲಿ ಕಲ್ಲು ತಂದು ತೂರಾಟಕ್ಕೆ ವ್ಯವಸ್ಥೆ ಮಾಡಿದವರನ್ನು ಬಿಡೋಲ್ಲ. ಈ ಘಟನೆಯಲ್ಲಿ ಶಾಮೀಲಾಗಿರುವ ಜನರು, ಹಿಂದಿರುವ ಉದ್ದೇಶ, ಹಿನ್ನೆಲೆ ಏನೆಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

b s yadiyurappa
ಬಿ ಎಸ್​ ಯಡಿಯೂರಪ್ಪ
author img

By

Published : Dec 25, 2019, 8:23 AM IST

ಮಂಗಳೂರು: ಗಲಭೆಯ ವಾಸ್ತವಿಕ ಸ್ಥಿತಿಗತಿ ಕುರಿತು ನಮ್ಮ ಅಧಿಕಾರಿಗಳು ದಾಖಲೆಗಳೊಂದಿಗೆ ವರದಿ ಬಿಡುಗಡೆ ಮಾಡಲಿದ್ದಾರೆ. ಇದರಲ್ಲಿ ಯಾರ ಕೈವಾಡವಿದೆ ಎಂದು ಸ್ಪಷ್ಟವಾಗಿರುವುದರಿಂದ ಇದೊಂದು ವ್ಯವಸ್ಥಿತ ಪಿತೂರಿ ಮತ್ತು ಷಡ್ಯಂತ್ರ ಎಂಬುದು ಸ್ಪಷ್ಟವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಸ್ಟೇಷನ್‌ಗೆ ಬೆಂಕಿ ಹಚ್ಚಲು ಪ್ರಯತ್ನ ಪಟ್ಟವರನ್ನು ಮತ್ತು ಗಾಡಿಗಳಲ್ಲಿ ಕಲ್ಲು ತಂದು ತೂರಾಟಕ್ಕೆ ವ್ಯವಸ್ಥೆ ಮಾಡಿದವರನ್ನು ಬಿಡೋಲ್ಲ. ಯಾರೆಲ್ಲಾ ಈ ಘಟನೆಯಲ್ಲಿ ಶಾಮೀಲಾಗಿದ್ದಾರೆ, ಅದರ ಹಿಂದಿರುವ ಉದ್ದೇಶ, ಹಿನ್ನೆಲೆ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತೇವೆ. ಅಲ್ಲದೆ ಅವರನ್ನು ಬಂಧಿಸಿ, ಕಾನೂನು ಕ್ರಮಕೈಗೊಳ್ಳಲಿದ್ದೇವೆ ಎಂದು ಎಚ್ಚರಿಸಿದರು.

ಮಂಗಳೂರು ಹಿಂಸಾಚಾರ ಕುರಿತು ಸಿಎಂ ಹೇಳಿಕೆ

ಕೇರಳದಲ್ಲಿ ಕೆಲವರು ಸ್ವಲ್ಪ ಗೊಂದಲ ಉಂಟುಮಾಡಲು ಪ್ರಯತ್ನಿಸಿದರು, ನಾನು ಅಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ, ಅದನ್ನೆಲ್ಲಾ ಟೀಕೆ ಮಾಡಲು ಹೋಗೋದಿಲ್ಲ. ಮಂಗಳೂರು ಘಟನೆಗೂ ಕೇರಳಕ್ಕೂ ಸಂಬಂಧ ಇದೆ ಎಂದು ನಾನು ಎಲ್ಲೂ ಹೇಳಿಲ್ಲ. ಇದರಲ್ಲಿ ಯಾರು ಭಾಗವಹಿಸಿದರು? ಅವರು ಎಲ್ಲಿಂದ ಬಂದವರು? ಎಂಬುದರ ಸತ್ಯಾಂಶದ ಬಗ್ಗೆ ತನಿಖೆಯಾಗಿ ಆರೋಪಿಗಳ ಬಂಧನವಾಗಲಿ ಎಂದು ಹೇಳಿದರು.

ಮಂಗಳೂರು ಘಟನೆಗೆ ಸಿಎಂ ಹಾಗೂ ಗೃಹಮಂತ್ರಿ ಕಾರಣ ಎಂದು ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಲ್ಪ ತಲೆ ಸರಿ ಇಲ್ಲದವರು ಈ ರೀತಿ ಹೇಳುತ್ತಾರೆ. ಪಾಪ ಅವರಿಗೆ ಹೇಳುವುದಕ್ಕೆ ಏನೂ ವಿಷಯ ಇಲ್ಲದ್ದರಿಂದ ಇಂತಹ ಅಸಂಬದ್ಧ ಹೇಳಿಕೆ ನೀಡುತ್ತಾರೆ. ಬಿಡುಗಡೆಯಾಗಿರುವ ವೀಡಿಯೋಗಳನ್ನು ನೋಡಿಯಾದರೂ ಬೇಜವಾಬ್ದಾರಿಯುತ ಹೇಳಿಕೆ ನೀಡುವುದನ್ನು ಕಾಂಗ್ರೆಸ್ ನಾಯಕರು ನಿಲ್ಲಿಸಲಿ ಎಂದು ವಿನಂತಿ ಮಾಡುತ್ತೇನೆ ಎಂದರು.

Intro:ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಘಟನೆಯ ಬಗ್ಗೆ ವಾಸ್ತವಿಕ ಸ್ಥಿತಿ ಏನೆಂಬುದನ್ನು ಎಲ್ಲಾ ದಾಖಲೆಗಳೊಂದಿಗೆ ನಮ್ಮ ಅಧಿಕಾರಿಗಳು ಬಿಡುಗಡೆ ಮಾಡಲಿದ್ದಾರೆ. ಎಲ್ಲಾ ಚ್ಯಾನಲ್ ಗಳಲ್ಲಿ ವಾಸ್ತವಿಕಾಂಶ ಹೊರ ಬರುತ್ತಿದ್ದು, ಇದರಲ್ಲಿ ಯಾರ ಕೈವಾಡವಿದೆ ಎಂದು ಸ್ಪಷ್ಟವಾಗಿರುವುದರಿಂದ ಇದೊಂದು ವ್ಯವಸ್ಥಿತ ಪಿತೂರಿ, ಷಡ್ಯಂತ್ರ ಎಂಬುದು ಸ್ಪಷ್ಟವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಟೇಷನ್ ಗೆ ಬೆಂಕಿ ಹಚ್ಚಲು ಪ್ರಯತ್ನ ಪಟ್ಟಿದ್ದು, ಗಾಡಿಗಳಲ್ಲಿ ಕಲ್ಲು ತಂದು ತೂರಾಟಕ್ಕೆ ವ್ಯವಸ್ಥೆ ಮಾಡಿದವರನ್ನು ಬಿಡೋಲ್ಲ ನಾವು. ಯಾರೆಲ್ಲಾ ಈ ಘಟನೆಯಲ್ಲಿ ಶಾಮೀಲಾಗಿದ್ದಾರೋ, ಅದರ ಹಿಂದಿರೋ ಉದ್ದೇಶ, ಹಿನ್ನೆಲೆ ಏನೆಂಬುದನ್ನು ತನಿಖೆ ನಡೆಸುತ್ತೇವೆ. ಅಲ್ಲದೆ ತಕ್ಷಣ ಅವರನ್ನು ಬಂಧಿಸಿ, ಕಾನೂನು ಕ್ರಮಕೈಗೊಳ್ಳಲಿದ್ದೇವೆ ಎಂದು ಹೇಳಿದರು.

Body:ಕೇರಳದಲ್ಲಿ ಕೆಲವರು ಸ್ವಲ್ಪ ಗೊಂದಲ ಉಂಟು ಮಾಡಲು ಪ್ರಯತ್ನಿಸಿದ್ದಾರೆ. ನಾನು ಸಹಜವಾಗಿ ದೇವಸ್ಥಾನಕ್ಕೆಂದು ಹೋಗಿದ್ದೆ. ಅದನ್ನೆಲ್ಲಾ ಟೀಕೆ ಮಾಡಲು ಹೋಗೋದಿಲ್ಲ‌. ಕೆಲವರು ಗೊಂದಲ ಮಾಡಲೆಂದೇ ಇರುತ್ತಾರೆ. ಮಂಗಳೂರು ಘಟನೆಗೂ ಕೇರಳಕ್ಕೂ ಸಂಬಂಧ ಇದೆ ಎಂದು ನಾವು ಎಲ್ಲೂ ಹೇಳಿಲ್ಲ. ಏನಿಲ್ಲಿ ವಾಸ್ತವಿಕ ಸ್ಥಿತಿ ಇದೆ, ಇದರಲ್ಲಿ ಯಾರು ಭಾಗವಹಿಸಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಆದರೆ ಯಾರು ಬಂದಿದ್ದಾರೆ. ಎಲ್ಲೆಲ್ಲಿಂದ ಬಂದಿದ್ದಾರೆ ಎಂಬುದರ ಸತ್ಯಾಂಶ ತನಿಖೆಯಾಗಲಿ. ಆರೋಪಿಗಳ ಬಂಧನವಾಗಲಿ ಎಂದು ಹೇಳಿದರು.

ಮಂಗಳೂರು ಘಟನೆಗೆ ಸಿಎಂ ಹಾಗೂ ಗೃಹಮಂತ್ರಿ ಕಾರಣ ಎಂದು ದಿನೇಶ್ ಗುಂಡೂರಾವ್ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಸ್ವಲ್ಪ ತಲೆ ಸರಿ ಇಲ್ಲದವರು ಈ ರೀತಿ ಹೇಳುತ್ತಾರೆ. ಪಾಪ ಅವರಿಗೆ ಹೇಳುವುದಕ್ಕೆ ಏನೂ ವಿಷಯ ಇಲ್ಲದಿರುವುದರಿಂದ ಇಂತಹ ಅಸಂಬದ್ಧ ಹೇಳಿಕೆ ನೀಡುತ್ತಾರೆ. ಬಿಡುಗಡೆಯಾಗಿರುವ ವೀಡಿಯೋಗಳನ್ನು ನೋಡಿಯಾದರೂ ಸ್ವಲ್ಪ ಬೇಜವಾಬ್ದಾರಿಯುತ ಹೇಳಿಕೆ ನೀಡುವುದನ್ನು ಕಾಂಗ್ರೆಸ್ ನಾಯಕರು ನಿಲ್ಲಿಸಲಿ ಎಂದು ವಿನಂತಿ ಮಾಡುತ್ತೇನೆಂದರು.

Reporter_Vishwanath PanjimogaruConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.