ಮಂಗಳೂರು: ಕರಾವಳಿಯಲ್ಲಿ ದೇವರಿಗಿಂತಲೂ ದೈವ, ಭೂತಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಇಲ್ಲಿ ದೈವಾರಾಧನೆಯನ್ನು ಜಾತಿ-ಭೇದ ಮರೆತು ಆರಾಧನೆ ಮಾಡಿಕೊಂಡು ಬರುತ್ತಿರುವುದು ವಿಶೇಷ. ಈ ಬಾರಿಯ ದೈವಾರಾಧನೆಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಭಾಗವಹಿಸಿ ಗಮನ ಸೆಳೆದರು.
ನಗರದ ಕೋಟೆಕಾರುವಿನಲ್ಲಿರುವ ಕೊರಗಜ್ಜ ದೈವದ ಸನ್ನಿಧಾನದಲ್ಲಿ ಪ್ರತಿ ವರ್ಷ ಕೋಲವನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯ ಕೋಲದಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಭಾಗಿಯಾಗಿ ಕೊರಗಜ್ಜ ದೈವದಿಂದ ಪ್ರಸಾದ ಸ್ವೀಕರಿಸಿದರು. ಅಂತರ್ ಧರ್ಮೀಯರಾದ ಖಾದರ್, ತುಳುವರ ಪ್ರಸಿದ್ಧ ದೈವ ಕೊರಗಜ್ಜನ ಕೋಲದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ, ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.