ETV Bharat / city

ಬೃಹತ್ ಗಾತ್ರದ ಕಂಚಿನ ದೀಪಸ್ತಂಭಗಳ ಕಳವು ಮಾಡಿದ್ದ ಇಬ್ಬರ ಬಂಧನ, ಮತ್ತಿಬ್ಬರಿಗೆ ಶೋಧ - ಮಂಗಳೂರು ಲೇಟೆಸ್ಟ್ ನ್ಯೂಸ್

ಬೃಹತ್ ಗಾತ್ರದ ಕಂಚಿನ ದೀಪಸ್ತಂಭಗಳ ಕಳವು ಮಾಡಿದ್ದ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸರು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

two thieves arrested in mangaluru
ಕಂಚಿನ ದೀಪಗಳನ್ನು ಕಳವು ಮಾಡಿದ್ದ ಇಬ್ಬರ ಬಂಧನ, ಮತ್ತಿಬ್ಬರಿಗೆ ಶೋಧ
author img

By

Published : Oct 23, 2021, 2:04 AM IST

ಮಂಗಳೂರು: ಬಬ್ಬುಕಟ್ಟೆ ಚಂದಪ್ಪ ಎಸ್ಟೇಟ್​​ನಿಂದ ಕಳವು ನಡೆಸಿದ ಆರೋಪದಲ್ಲಿ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಮುಂದುವರಿದಿದೆ.

ಮದನಿನಗರ ನಿವಾಸಿ ನಿಝಾಂ, ಮಾಸ್ತಿಕಟ್ಟೆಯ ಆಶಿ ಯಾನೆ ಆಸೀಫ್ ಬಂಧಿತರಾಗಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗೆ ಶೋಧ ಮುಂದುವರಿದಿದೆ.

ಪ್ರಕರಣದ ಹಿನ್ನೆಲೆ: ಅಕ್ಟೋಬರ್​​​ 7ರಂದು ವಿದೇಶದಲ್ಲಿ ವಾಸವಿರುವ ಸುಜಾತಾ ಎಂಬುವರ ಮನೆಯಲ್ಲಿ ಕಳವು ನಡೆದಿದೆ. ಬೆಲೆ ಬಾಳುವ ಮೂರು ಕಂಚಿನ ದೀಪಗಳನ್ನು ಕಳವು ನಡೆಸಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ತಿಳಿದು ಕಳ್ಳರು ಕೃತ್ಯ ಎಸಗಿದ್ದರು.

ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಸೊತ್ತುಗಳಿಗಾಗಿ ಹುಡುಕಾಡಿ ಬಳಿಕ ಏನೂ ಸಿಗದಿದ್ದಾಗ ಮೂರು ಬೃಹತ್ ಗಾತ್ರದ ಕಂಚಿನ ದೀಪಗಳನ್ನು ಕಳವು ನಡೆಸಿದ್ದಾರೆ. ರಬ್ಬರ್ ತೋಟದ ನಡುವೆ ಇರುವ ಬೃಹತ್ ಮನೆಯವರೆಲ್ಲರೂ ವಿದೇಶದಲ್ಲಿದ್ದು, ಸಂಬಂಧಿಕರು ಎರಡು ದಿನಕ್ಕೊಮ್ಮೆ ಬಂದು ನೋಡಿ ಹೋಗುತ್ತಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಕಾಲುವೆ ಜಾಗ ಒತ್ತುವರಿ ಮಾಡಿ ಮನೆ ನಿರ್ಮಾಣ ಆರೋಪ: ಸಚಿವ ಆನಂದ ಸಿಂಗ್ ವಿರುದ್ಧ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.