ETV Bharat / city

ಅಕ್ರಮ ಮರ ದಾಸ್ತಾನು ಮೇಲೆ ದಾಳಿ ಮಾಡಿದ ಮಹಿಳಾ ಅಧಿಕಾರಿಯ ವರ್ಗಾವಣೆ.. ಶಾಸಕ ಪೂಂಜಾ ವಿರುದ್ಧ ಖಾದರ್​ ಆರೋಪ

ಮೀಸಲು ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ದಾಸ್ತಾನು ಮಾಡುತ್ತಿದ್ದ ಕೇಂದ್ರಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದ ಅರಣ್ಯಾಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ.

trees-smuggling
ಮರಗಳ ಕಳ್ಳಸಾಗಾಣಿಕೆ
author img

By

Published : Jan 29, 2022, 8:55 PM IST

ಮಂಗಳೂರು: ಮೀಸಲು ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ದಾಸ್ತಾನು ಮಾಡುತ್ತಿದ್ದ ಕೇಂದ್ರಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದ ಅರಣ್ಯಾಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ.

ಅರಣ್ಯ ಸಂಚಾರಿ ದಳ ಉಡುಪಿ ವಿಭಾಗದಲ್ಲಿರುವ ಸಂಧ್ಯಾ ಅವರು ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಸಂಚಾರಿ ದಳದ ಪ್ರಭಾರ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಬೆಳ್ತಂಗಡಿಯಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ದಾಸ್ತಾನು ಮಾಡಿಟ್ಟಿದ್ದ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದರು. ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಸಂಧ್ಯಾ ಅವರನ್ನು ಬೀದರ್​ಗೆ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು ಎನ್ನಲಾಗ್ತಿದೆ.

ವರ್ಗಾವಣೆಗೊಂಡ ಅರಣ್ಯಾಧಿಕಾರಿ ಸಂಧ್ಯಾ
ವರ್ಗಾವಣೆಗೊಂಡ ಅರಣ್ಯಾಧಿಕಾರಿ ಸಂಧ್ಯಾ

ಇದೀಗ ಅಧಿಕಾರಿ ಸಂಧ್ಯಾ ಅವರನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೊಂಡ ಸಂಧ್ಯಾ ಅವರು ಬೆಳ್ತಂಗಡಿಯ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಪತ್ರ ಬರೆದು ಶಾಸಕ ಹರೀಶ್ ಪೂಂಜಾ ಅವರು ನನ್ನ ಮೇಲೆ ವೈಯಕ್ತಿಕ ದ್ವೇಷ, ಹಗೆತನ ಸಾಧಿಸಿ ಮರಗಳ್ಳರಿಗೆ ಅನುಕೂಲ ಮಾಡಿಕೊಡಲು ನನ್ನನ್ನು ಬೀದರ್​ಗೆ ವರ್ಗಾವಣೆ ಮಾಡಿಸಿದ್ದಾರೆ. ನನ್ನ ಮೇಲಿನ ದಬ್ಬಾಳಿಕೆಯನ್ನು ಖಂಡಿಸಿ ನ್ಯಾಯ ಕೊಡಿಸುವಂತೆ ಕೋರಿದ್ದಾರೆ ಎನ್ನಲಾಗ್ತಿದೆ.

ಶಾಸಕ ಹರೀಶ್ ಪೂಂಜಾ ಅವರು ಸಂಧ್ಯಾ ಅವರನ್ನು ವರ್ಗಾವಣೆ ಮಾಡುವಂತೆ ಬರೆದ ಪತ್ರ ಮತ್ತು ಸಂಧ್ಯಾ ಅವರು ನ್ಯಾಯ ಕೇಳಿ ಸಂಘಟನೆಗಳಿಗೆ ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಎಂದು ತಿಳಿದುಬಂದಿದೆ.

ಸಮಗ್ರ ತನಿಖೆ ನಡೆಸಲು ಮಾಜಿ ಸಚಿವ ಖಾದರ್ ಆಗ್ರಹ

ಸಮಗ್ರ ತನಿಖೆ ನಡೆಸಲು ಮಾಜಿ ಸಚಿವ ಖಾದರ್ ಆಗ್ರಹ: ಮರಗಳ ಕಳ್ಳ ಸಾಗಾಣಿಕೆ ತಡೆಯಲು ಮುಂದಾಗಿದ್ದ ಅಧಿಕಾರಿಯನ್ನು ಬೇರೆಡೆಗೆ ವರ್ಗ ಮಾಡಲು ಶಾಸಕ ಹರೀಶ್​ ಪೂಂಜಾ ಅವರು ಸಿಎಂಗೆ ಪತ್ರ ಬರೆದು ಕೋರಿದ್ದಾರೆ. ಮರ ಕಳ್ಳ ಸಾಗಾಣಿಕೆ ಬಗ್ಗೆ ವಿಜಿಲೆನ್ಸಿ ತಂಡದಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಯು ಟಿ ಖಾದರ್ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದೆಡೆ ಅಕ್ರಮ ಮರ ದಾಸ್ತಾನು ಮಾಡಿರುವುದರ ವಿರುದ್ಧ ದಾಳಿ ಮಾಡಿದ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು, ಮತ್ತೊಂದೆಡೆ ಮೀಸಲು ಅರಣ್ಯ ಪ್ರದೇಶದಲ್ಲಿ 500ಕ್ಕೂ ಅಧಿಕ ಮರಗಳನ್ನು ಕಡಿದಿರುವುದು ಗಂಭೀರ ವಿಚಾರ. ಈ ಬಗ್ಗೆ ಜಿಲ್ಲೆಯ ಶಾಸಕರು, ಸಂಸದರು ಧ್ವನಿಯೆತ್ತಬೇಕು ಎಂದು ಒತ್ತಾಯಿಸಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.