ಮಂಗಳೂರು: ಪ್ರವಾಹಕ್ಕೆ ಬೆಳ್ತಂಗಡಿ ತಾಲೂಕಿನ ಬಂಜಾರು ಮಲೆ ಹಾಗೂ ಕುಕ್ಕಾವು ಸೇತುವೆಗಳು ಕೊಚ್ಚಿಹೋಗಿ ಸಂಪೂರ್ಣ ರಸ್ತೆ ಸಂಪರ್ಕವನ್ನು ಕಡಿದುಕೊಂಡಿದ್ದವು. ಇದೀಗ ಸಮರೋಪಾದಿಯಲ್ಲಿ ಸೇತುವೆಯ ಕಾಮಗಾರಿ ನಡೆಸಲಾಗಿದ್ದು, ದುರಸ್ತಿ ಕಾರ್ಯವನ್ನ ಜಿಲ್ಲಾಡಳಿತ ಕೇವಲ ಒಂದೇ ದಿನದೊಳಗೆ ಪೂರ್ಣಗೊಳಿಸಿದೆ.
ಬಂಜಾರು ಮಲೆಯಲ್ಲಿ ಹಳೆಯ ಮರದ ಸೇತುವೆಯ ಮೇಲೆಯೇ ನಿಂತು ಕಬ್ಬಿಣದ ಸೇತುವೆಯನ್ನು ನಿರ್ಮಿಸಲಾಗಿದೆ. ಅಲ್ಲದೆ 22 ಮಂದಿ ಈ ಸೇತುವೆ ಮೇಲೆ ನಿಂತು ಇದರ ಸದೃಢತೆಯನ್ನು ಪರೀಕ್ಷಿಸಿದ್ದಾರೆ.
ಕುಕ್ಕಾವಿನಲ್ಲಿ ಮಣ್ಣು ಹಾಕಿ ದುರಸ್ತಿಗೊಳಿಸಿದ ಸೇತುವೆಯಲ್ಲಿ ಇಂದಿನಿಂದ ಜನಸಂಚಾರ ಹಾಗೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.