ETV Bharat / bharat

ಆಂಧ್ರದಲ್ಲಿ ಓಡಾಡುವ ದೇಶದ ಎಲ್ಲ ಹಿರಿಯ ನಾಗರಿಕರಿಗೆ ಬಸ್​ ಪ್ರಯಾಣ ದರದಲ್ಲಿ ಶೇ 25 ರಷ್ಟು ರಿಯಾಯಿತಿ - BUS FARE CONCESSION

ದೇಶದ ಎಲ್ಲಾ ರಾಜ್ಯಗಳ ಹಿರಿಯ ನಾಗರಿಕರಿಗೆ, ಆಂಧ್ರದ ಬಸ್​ ಪ್ರಯಾಣ ದರದಲ್ಲಿ ಶೇ 25ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಅಲ್ಲಿನ ಸಾರಿಗೆ ನಿಗಮ ಹೇಳಿದೆ.

ಎಪಿಎಸ್ಆರ್​​ಟಿಸಿ ಬಸ್
ಎಪಿಎಸ್ಆರ್​​ಟಿಸಿ ಬಸ್ (IANS)
author img

By ETV Bharat Karnataka Team

Published : Nov 15, 2024, 4:11 PM IST

ಅಮರಾವತಿ, ಆಂಧ್ರಪ್ರದೇಶ: ದೇಶದ ಯಾವುದೇ ರಾಜ್ಯದ ಹಿರಿಯ ನಾಗರಿಕರಿಗೆ, ಆಂಧ್ರ ಬಸ್​ಗಳಲ್ಲಿ ಪ್ರಯಾಣಿಸಿದರೆ ಅವರಿಗೆ ಶೇ 25 ರಷ್ಟು ರಿಯಾಯಿತಿ ನೀಡುವುದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಘೋಷಿಸಿದೆ. 60 ವರ್ಷ ಪೂರೈಸಿದ ನಾಗರಿಕರು ಸರ್ಕಾರಿ ಸ್ವಾಮ್ಯದ ಸಾರಿಗೆಯ ಎಲ್ಲಾ ರೀತಿಯ ಬಸ್​ಗಳಲ್ಲಿ ಈ ರಿಯಾಯಿತಿ ಪಡೆಯಲಿದ್ದಾರೆ.

ಟಿಕೆಟ್ ನೀಡುವ ಸಮಯದಲ್ಲಿ ಅಥವಾ ಪ್ರಯಾಣದ ಸಮಯದಲ್ಲಿ ಹಿರಿಯ ನಾಗರಿಕರಿಂದ ಅವರ ವಯಸ್ಸಿನ ಪುರಾವೆಯಾಗಿ ಆಧಾರ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್ ಅಥವಾ ಪಡಿತರ ಚೀಟಿಯನ್ನು ಪರಿಶೀಲಿಸುವಂತೆ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ನಿರ್ದೇಶಿಸಲಾಗಿದೆ. ಪ್ರಯಾಣಿಕರು ಈ ಯಾವುದೇ ದಾಖಲೆಗಳನ್ನು ಭೌತಿಕ ರೂಪದಲ್ಲಿ ಅಥವಾ ಡಿಜಿಟಲ್ ರೂಪದಲ್ಲಿ ಸಂಬಂಧಪಟ್ಟ ಸಿಬ್ಬಂದಿಗೆ ತೋರಿಸಿದರೆ ಸಾಕು.

ಈ ಎಲ್ಲ ದಾಖಲೆ ತೋರಿಸಿ ರಿಯಾಯಿತಿ ಪಡೆದುಕೊಳ್ಳಬಹುದು: "60 ವರ್ಷ ಪೂರೈಸಿದ ಹಿರಿಯ ನಾಗರಿಕರು ಯಾವುದೇ ರಾಜ್ಯ ಸರ್ಕಾರ ಅಥವಾ ಭಾರತ ಸರ್ಕಾರ ನೀಡಿದ, ಭೌತಿಕ ಅಥವಾ ಡಿಜಿಟಲ್ ರೂಪದಲ್ಲಿರುವ ವಯಸ್ಸಿನ ಯಾವುದೇ ಪುರಾವೆಗಳನ್ನು ಹಾಜರುಪಡಿಸಿ ಶೇಕಡಾ 25 ರಷ್ಟು ರಿಯಾಯಿತಿಯನ್ನು ಪಡೆಯಬಹುದು" ಎಂದು ಎಪಿಎಸ್ಆರ್​​ಟಿಸಿ ಆದೇಶದಲ್ಲಿ ತಿಳಿಸಿದೆ. ಆದೇಶದ ಅನುಷ್ಠಾನ ಖಚಿತಪಡಿಸಿಕೊಳ್ಳಲು ಸಂಸ್ಥೆಯು ಎಲ್ಲಾ ಕ್ಷೇತ್ರ ಅಧಿಕಾರಿಗಳು ಮತ್ತು ಮೇಲ್ವಿಚಾರಕರಿಗೆ ನಿರ್ದೇಶನ ನೀಡಿದೆ.

ಈ ಮೊದಲು ಆಂಧ್ರಪ್ರದೇಶದ ಹಿರಿಯ ನಾಗರಿಕರಿಗೆ ಮಾತ್ರ ಬಸ್​ಗಳಲ್ಲಿ ಶೇಕಡಾ 25 ರಷ್ಟು ರಿಯಾಯಿತಿ ಲಭ್ಯವಿತ್ತು. ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ರಿಯಾಯಿತಿಯನ್ನು 2020 ರಲ್ಲಿ ನಿಲ್ಲಿಸಲಾಗಿತ್ತು. ಸದ್ಯ ಈ ರಿಯಾಯಿತಿಯನ್ನು ಪುನರಾರಂಭಿಸಲಾಗಿದೆ.

ಇಷ್ಟರಲ್ಲೇ ಮಹಿಳೆಯರಿಗೆ ಉಚಿತ ಬಸ್​​ ಪಯಾಣ: ಇದು ಮಾತ್ರವಲ್ಲದೇ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಅದರ ಮಿತ್ರಪಕ್ಷಗಳು ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಕೂಡ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಎಪಿಎಸ್ಆರ್​ಟಿಸಿ ಇಷ್ಟರಲ್ಲೇ ಆರಂಭಿಸುವ ಸಾಧ್ಯತೆಯಿದೆ.

ಎಪಿಎಸ್ಆರ್​ಟಿಸಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವು 'ಸೂಪರ್ ಸಿಕ್ಸ್' ಭರವಸೆಗಳ ಅಡಿ ಟಿಡಿಪಿ ನೀಡಿದ ಭರವಸೆಗಳಲ್ಲಿ ಒಂದಾಗಿದೆ. ಈ ಯೋಜನೆಗಳನ್ನು ಟಿಡಿಪಿ ಮತ್ತು ಅದರ ಮಿತ್ರ ಪಕ್ಷಗಳಾದ ಜನಸೇನಾ ಮತ್ತು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ರಾಜ್ಯ ಸರ್ಕಾರ ಶೀಘ್ರದಲ್ಲೇ ಈ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಇತ್ತೀಚೆಗೆ ಹೇಳಿದ್ದಾರೆ.

ಇದನ್ನೂ ಓದಿ : ಆನೆ ಬಳಕೆಗೆ ಕೋರ್ಟ್ ನಿರ್ಬಂಧ: ಧಾರ್ಮಿಕ ಉತ್ಸವ ಸಾಧ್ಯವೇ ಇಲ್ಲ ಎಂದ ಕೇರಳ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.