ಸುಳ್ಯ : ನಗರದ ಪತ್ರಿಕೆಯೊಂದರ ಮೂವರು ಪತ್ರಕರ್ತರು ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಕಡಬದ 5 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಸುಳ್ಯದ ಒಬ್ಬರು ಪತ್ರಕರ್ತರ ವರದಿ ನಿನ್ನೆ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಇವರ ಪ್ರಾಥಮಿಕ ಸಂಪರ್ಕಿತರಾದ ಅವರ ಕಚೇರಿಯ ಇತರ ಪತ್ರಕರ್ತರು ತಪಾಸಣೆಗೆ ಒಳಗಾದಾಗ ಇನ್ನಿಬ್ಬರಿಗೆ ಸೋಂಕು ತಗುಲಿರುವುದು ಕಂಡು ಬಂತು. ಸದ್ಯ ಪತ್ರಕರ್ತರು ಅವರ ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದಾರೆ.
ಇನ್ನು ಸುಳ್ಯ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ಜಾಲ್ಸೂರಿನಲ್ಲಿ ನಡೆದ ಕೊರೊನಾ ರ್ಯಾಪಿಡ್ ಆಂಟಿಜೆನ್ ತಪಾಸಣೆಗೆ ಒಳಗಾಗಿದ್ದರು, ಅವರ ವರದಿ ಇಂದು ಪಾಸಿಟಿವ್ ಬಂದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡಬದ ಕೋಡಿಂಬಾಳ ಎಂಬಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಮತ್ತು ಕಡಬದ ಒಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.