ETV Bharat / city

ಮಹಿಳೆಯ ಜೊತೆಗೆ ಅಸಭ್ಯ ವರ್ತನೆ, ರಿಕ್ಷಾ ಚಾಲಕ ಅರೆಸ್ಟ್ - sexual harassment in manglore

ಮಹಿಳೆಯ ಜೊತೆಯಲ್ಲಿ ಅಸಭ್ಯವಾಗಿ ವರ್ತಿಸಿದ ರಿಕ್ಷಾ ಚಾಲಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಮೀರ್ ಎಂದು ಗುರುತಿಸಲಾಗಿದೆ..

sexual-harassment-accused-arrested-by-the-police
ಮಹಿಳೆಯ ಜೊತೆಗ ಅಸಭ್ಯ ವರ್ತನೆ, ರಿಕ್ಷಾ ಚಾಲಕ ಅರೆಸ್ಟ್
author img

By

Published : Mar 22, 2022, 4:13 PM IST

Updated : Mar 22, 2022, 4:43 PM IST

ಮಂಗಳೂರು : ಮಹಿಳೆಯ ಜೊತೆಯಲ್ಲಿ ಅಸಭ್ಯವಾಗಿ ವರ್ತಿಸಿದ ರಿಕ್ಷಾ ಚಾಲಕನನ್ನು ಮಂಗಳೂರಿನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುನ್ನೂರು ಗ್ರಾಮದ ಸಮೀರ್ ( 22) ಎಂದು ಗುರುತಿಸಲಾಗಿದೆ.

ಮಾ.21 ರಂದು ಮಹಿಳೆಯೊಬ್ಬರು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಕ್ಷಾವೊಂದನ್ನು ಹತ್ತಿದ್ದಾರೆ. ಮಹಿಳೆ ರಿಕ್ಷಾ ಹತ್ತಿದ ಕೂಡಲೇ ಪರಿಚಯ ಮಾಡಿಕೊಂಡ ಆರೋಪಿ ಸಮೀರ್, ಯಾವುದೇ ತುರ್ತು ಸಂದರ್ಭದಲ್ಲಿ ಕರೆ ಮಾಡುವಂತೆ ಸೂಚಿಸಿ ಮಹಿಳೆಗೆ ತನ್ನ ಮೊಬೈಲ್ ನಂಬರ್ ನೀಡಿದ್ದಾನೆ. ಜೊತೆಗೆ ಅಶ್ಲೀಲವಾಗಿ ಮಾತನಾಡಿದ್ದಲ್ಲದೇ ರಿಕ್ಷಾದಲ್ಲಿಯೇ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನಡೆಸಲೆತ್ನಿಸಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ಮಹಿಳೆಯು ಮನೆಗೆ ಬಂದು ತನ್ನ ಮಗನಲ್ಲಿ ವಿಚಾರ ತಿಳಿಸಿದ್ದು, ಈ ಬಗ್ಗೆ ವಿಚಾರಿಸಲು ರಿಕ್ಷಾ ಚಾಲಕನ ಬಳಿ ಹೋದಾಗ ಆರೋಪಿ ಬೆದರಿಸಿದ್ದಾನೆ. ಪ್ರಕರಣ ಸಂಬಂಧ ಮಹಿಳೆಯು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ರಿಕ್ಷಾವನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಓದಿ : ಅಪ್ಪುಗೆ ವಿಶೇಷ ಗೌರವ ಸಲ್ಲಿಸಿದ ಹುಬ್ಬಳ್ಳಿ ಜನ : ಬಣ್ಣದ ಹಬ್ಬದಲ್ಲಿ ಪುನೀತ್ ಸ್ಮರಣೆ

Last Updated : Mar 22, 2022, 4:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.