ಮಂಗಳೂರು: ಚಕ್ರವರ್ತಿ ಸೂಲಿಬೆಲೆಯವರಿಗೆ ಕೇಂದ್ರ ಸರ್ಕಾರದ ಪರ ನಿಂತು ಸಾಕಾಗಿ, ಈಗ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಬಿಜೆಪಿ ಸಂಸದರ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವಿಚಾರ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಲಿಬೆಲೆ ಈ ಹಿಂದೆ ಹೇಳಿದ ಯಾವುದೇ ಮಾತು ಅನುಷ್ಠಾನ ಆಗಿಲ್ಲ. ಕಪ್ಪು ಹಣ ಸೇರಿದಂತೆ ಇತರ ಯೋಜನೆಗಳು ಸುಳ್ಳಾಗಿದೆ. ಸೂಲಿಬೆಲೆ ಹೇಳೋದೆಲ್ಲಾ ಸುಳ್ಳು ಎಂದು ಜನರಿಗೆ ಗೊತ್ತಾಗಿದೆ. ತಾನು ಹೇಳಿದ್ದು ಸುಳ್ಳಾಯ್ತು ಎಂದು ಸೂಲಿಬೆಲೆ ಆತ್ಮಸಾಕ್ಷಿಗೆ ಅರ್ಥವಾಗಿರಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ವ್ಯಕ್ತಪಡಿಸಿರಬಹುದು ಎಂದು ತಿಳಿಸಿದ್ದಾರೆ.