ETV Bharat / city

ಅಕ್ರಮ ಸ್ಫೋಟಕ ತಯಾರಿಕಾ ಘಟಕ ಪತ್ತೆ ಪ್ರಕರಣ: ಸಮಗ್ರ ತನಿಖೆಗೆ ಎಸ್​ಡಿಪಿಐ ಒತ್ತಾಯ - ಸ್ಟೋಟಕ ತಯಾರಿಕಾ ಘಟಕ ಕುರಿತು ಎಸ್​ಡಿಪಿಐ ಪ್ರತಿಕ್ರಿಯೆ

ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಜೋಡಿ ಎಂಬಲ್ಲಿ ಅಕ್ರಮ ಸ್ಫೋಟಕ ತಯಾರಿಕಾ ಘಟಕ ಪತ್ತೆಯಾಗಿದ್ದು, ಸಮಗ್ರ ತನಿಖೆ ನಡೆಸಿ ಮುಂದಿನ 10 ದಿನಗಳೊಳಗೆ ಆರೋಪಿಗಳನ್ನು ಬಂಧಿಸುವಂತೆ ಎಸ್​ಡಿಪಿಐ ಕ್ಷೇತ್ರ ಸಮಿತಿಯ ಅಧ್ಯಕ್ಷ ಕೆ.ಎ.ಸಿದ್ದಿಕ್ ಆಗ್ರಹಿಸಿದರು.

putturu-sdpi-response-to-bomb-manufacturing-unit
ಸ್ಟೋಟಕ ತಯಾರಿಕಾ ಘಟಕ ಪತ್ತೆ ಪ್ರಕರಣ
author img

By

Published : Dec 27, 2019, 8:06 AM IST

ಪುತ್ತೂರು : ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಜೋಡಿ ಎಂಬಲ್ಲಿ ಅಕ್ರಮ ಸ್ಫೋಟಕ ತಯಾರಿಕಾ ಘಟಕ ಪತ್ತೆಯಾಗಿದ್ದು, ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಎಸ್​ಡಿಪಿಐ ಕ್ಷೇತ್ರ ಸಮಿತಿಯ ಅಧ್ಯಕ್ಷ ಕೆ.ಎ.ಸಿದ್ದಿಕ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಸ್ಫೋಟಕ ತಯಾರಿಕಾ ಘಟಕವನ್ನು ಪತ್ತೆ ಮಾಡಿರುವ ಸಂಪ್ಯ ಪೊಲೀಸರು ಕೇರಳ ಹಾಗು ತಮಿಳುನಾಡಿನ ತಲಾ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ತೋಟದ ಮಾಲೀಕ ಹಾಗೂ ಸ್ಥಳೀಯರು ಸಹಕರಿಸಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಮುಂದಿನ 10 ದಿನದೊಳಗೆ ಬಂಧಿಸುವ ಕೆಲಸ ಆಗಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸ್ಫೋಟಕ ತಯಾರಿಕಾ ಘಟಕ ಪತ್ತೆ ಪ್ರಕರಣದ ಸಮಗ್ರ ತನಿಖೆಗೆ ಎಸ್​ಡಿಪಿಐ ಒತ್ತಾಯ

ಕರ್ನಾಟಕ ಕೆರಳ ಗಡಿಪ್ರದೇಶದಲ್ಲಿ ಈಗಾಗಲೇ ಪ್ರಕ್ಷುಬ್ಧ ಪರಿಸ್ಥಿತಿಯಿದ್ದು, ಸ್ಫೋಟಕ ತಯಾರಿಕಾ ಘಟಕದ ಪತ್ತೆಯಿಂದ ಜನರಲ್ಲಿ ಆತಂಕ ಸೃಷ್ಠಿಯಾಗಿದೆ. ಅಲ್ಲದೆ ಬಂಧಿತ ಆರೋಪಿ ಬಾಂಬ್​ ಸ್ಫೋಟ ಪ್ರಕರಣವೊಂದರ ಆರೋಪಿ ಎಂಬ ಸುದ್ದಿ ಹರಡಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಮತ್ತು ತೋಟದ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಸ್ಥಳೀಯ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗೋಲಿಬಾರ್​ನಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಡಿ ಎಂದು ಯಾರೂ ಒತ್ತಾಯ ಮಾಡಿಲ್ಲ, ಹೀಗಿದ್ದರೂ ಅವರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿರುವ ಮುಖ್ಯಮಂತ್ರಿಯವರು ಇದೀಗ ದಿನಕ್ಕೊಂದರಂತೆ ಮಾತು ಬದಲಾಯಿಸುತ್ತಿದ್ದಾರೆ ಎಂದರೆ ಏನರ್ಥ? ಇಂಥ ಸಿಎಂ ಅವರಿಂದ ಜನರು ಏನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದರು.

ಎಸ್​ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಬ್ದುಲ್ ಹಮೀದ್ ಹಾಜಿ, ನೆಟ್ಟಣಿಗೆ ಮುಡ್ನೂರು ಗ್ರಾ. ಪಂ. ಸದಸ್ಯ ಸಂಶುದ್ದೀನ್, ಎಸ್ಡಿಪಿಐ ಈಶ್ವರಮಂಗಲ ಘಟಕದ ಅಧ್ಯಕ್ಷ ಉಮ್ಮರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Intro:Body:ಪುತ್ತೂರು : ದೇಶದಾದ್ಯಂತ ಪೌರತ್ವ ಕಾಯ್ದೆಯ ವಿರುದ್ದ ಪ್ರತಿಭಟನೆಯ ಕಾವು ಇರುವ ಸಂದರ್ಭದಲ್ಲಿಯೇ ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ ಎಂಬಲ್ಲಿ ಸ್ಫೋಟಕ ತಯಾರಿಕಾ ಘಟಕ ಪತ್ತೆಯಾಗಿದೆ. ಕೋಮುಗಲಭೆ ನಡೆಸುವ ಉದ್ದೇಶದಿಂದಲೇ ಅಲ್ಲಿ ನಾಡಬಾಂಬ್ ತಯಾರಿಸುವ ಪಡ್ಯಂತ್ರದ ಬಗ್ಗೆ ಬಲವಾದ ಶಂಕೆ ಇರುವುದರಿಂದ ಪ್ರಕರಣದ ಸಮಗ್ರ ವಿಚಾರಣೆ ನಡೆಸಬೇಕು, ಸ್ಪೋಟಕ ತಯಾರಿಸಲು ಆಶ್ರಯ ನೀಡಿ ಸಹಕರಿಸಿದ ಮಂದಿಯನ್ನು ಕೂಡಲೇ ಬಂಧಿಸಬೇಕು ಎಂದು ಎಸ್ಡಿಪಿಐ ಕ್ಷೇತ್ರ ಸಮಿತಿಯ ಅಧ್ಯಕ್ಷ ಕೆ.ಎ.ಸಿದ್ದೀಕ್ ಅವರು ಆಗ್ರಹಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಫೋಟಕ ತಯಾರಿಕಾ ಘಟಕವನ್ನು ಪತ್ತೆ ಮಾಡಿ ಸಂಪ್ಯ ಪೊಲೀಸರು ಕೇರಳದ ಇಬ್ಬರು ಹಾಗೂ ತಮಿಳುನಾಡಿನ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ .ಪೊಲೀಸರ ಈ ಕಾರ್ಯವನ್ನು ನಾವು ಶ್ಲಾಘಿಸುತ್ತೇವೆ. ಸ್ಫೋಟಕ ತಯಾರಿಕಾ ಘಟಕ ಆರಂಭಿಸಲು ಆರೋಪಿಗಳಿಗೆ ತೋಟದ ಮಾಲಿಕ ಹಾಗೂ ಸ್ಥಳೀಯರು ಸಹಕರಿಸಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರೆಲ್ಲರನ್ನೂ ಬಂಧಿಸುವ ಕೆಲಸ ಆಗಬೇಕು. ಮುಂದಿನ 10 ದಿನದೊಳಗೆ ಈ ನಡೆಯದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಕನರ್ಾಟಕ ಕೇರಳ ಗಡಿಪ್ರದೇಶದಲ್ಲಿ ಈಗಾಗಲೇ ಪ್ರಕ್ಷುಬ್ಧ ಪರಿಸ್ಥಿತಿಯಿದ್ದು, ಇದೇ ಭಾಗದಲ್ಲಿ ಅಕ್ರಮ ಸ್ಫೋಟಕ ತಯಾರಿಕಾ ಘಟಕ ಪತ್ತೆಯಾಗಿರುವುದು ಜನತೆಯಲ್ಲಿ ಆತಂಕ ಸೃಷ್ಠಿಸಿದೆ. ಬಂಧಿತ ಆರೋಪಿಗಳ ಪೈಕಿ ಒಬ್ಬ ಕಣ್ಣೂರಿನಲ್ಲಿ ಈ ಹಿಂದೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣವೊಂದರ ಆರೋಪಿ ಎಂಬ ಪ್ರಚಾರ ಹರಡಿರುವುದು ಆತಂಕವನ್ನು ಇಮ್ಮಡಿಸಿದೆ. ಆದರೂ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಸ್ಫೋಟಕ ಘಟಕ ಪತ್ತೆಯಾದ ತೋಟದ ಮಾಲಕರ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿ ಹೆಸರು ಕೇಳಿ ಬರುತ್ತಿರುವ ಮಂದಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿಲ್ಲ. ಸ್ಥಳದಿಂದ ವಶಪಡಿಸಿಕೊಳ್ಳಲಾದ ಕ್ವಾಲೀಸ್ ಕಾರು ಮತ್ತು ಸ್ಫೋಟಕದ ಬಗ್ಗೆಯೂ ಯಾವುದೇ ಸುಳಿವು ನೀಡಿಲ್ಲ ಎಂದು ದೂರಿದರು.
ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಸ್ಥಳೀಯ ಆರೋಪಿಗಳನ್ನು ಬಿಟ್ಟಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡಿದ್ದಾರೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಂಗಳೂರಿನ ಗೋಲಿಬಾರ್ನಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಡಿ ಎಂದು ಯಾರೂ ಒತ್ತಾಯ ಮಾಡಿಲ್ಲ, ಕಾಡಿ ಬೇಡಿಲ್ಲ. ನ್ಯಾಯ ಕೊಡಿ ಎಂದು ಮಾತ್ರ ಆಗ್ರಹಿಸಿದ್ದಾರೆ. ಹೀಗಿದ್ದರೂ ಅವರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿರುವ ಮುಖ್ಯಮಂತ್ರಿಯವರು ಇದೀಗ ದಿನಕ್ಕೊಂದರಂತೆ ಮಾತು ಬದಲಾಯಿಸುತ್ತಿದ್ದಾರೆ ಎಂದರೆ ಏನರ್ಥ, ಇಂಥ ಮುಖ್ಯಮಂತ್ರಿಯಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಕೆ.ಎ.ಸಿದ್ದೀಕ್ ಅವರು ಪ್ರಶ್ನಿಸಿದರು. ಮಂಗಳೂರಿನಲ್ಲಿ ನಡೆದ ಘಟನೆಗೆ ಪೊಲೀಸರೇ ಕಾರಣ,ಜನರನ್ನು ಆಕ್ರೋಶಿತರಾಗಿ ಮಾಡಿದ್ದೇ ಪೊಲೀಸರು ಎಂದು ಅವರು ಆರೋಪಿಸಿದರು.
ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಇಬ್ರಾಹಿಂ ಸಾಗರ್,ಕಾರ್ಯದಶರ್ಿ ಅಬ್ದುಲ್ ಹಮೀದ್ ಹಾಜಿ, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಸದಸ್ಯ ಸಂಶುದ್ದೀನ್, ಎಸ್ಡಿಪಿಐ ಈಶ್ವರಮಂಗಲ ಘಟಕದ ಅಧ್ಯಕ್ಷ ಉಮ್ಮರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.