ETV Bharat / city

ಮೆಸ್ಕಾಂ ವಿದ್ಯುತ್ ದರ ಏರಿಕೆ ಖಂಡಿಸಿ ಸಿಪಿಐಎಂ ಪ್ರತಿಭಟನೆ - undefined

ಇತ್ತೀಚಿನ ದಿನಗಳಲ್ಲಿ ಮೆಸ್ಕಾಂ, ರಾಜ್ಯದ ಜನತೆಗೆ ವಿಪರೀತವಾಗಿ ವಿದ್ಯುತ್ ಬೆಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿ ಮೆಸ್ಕಾಂನ ಪ್ರಧಾನ ಕಚೇರಿ ಮುಂಭಾಗ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿದ್ಯುತ್ ದರ ಹೆಚ್ಚಳ ಖಂಡಿಸಿ ಮೆಸ್ಕಾಂ ಪ್ರಧಾನ ಕಚೇರಿ ಮುಂಭಾಗ ಪ್ರತಿಭಟನೆ
author img

By

Published : Jul 19, 2019, 7:08 PM IST

ಮಂಗಳೂರು: ಮೆಸ್ಕಾಂ ನಿರಂತರವಾಗಿ ವರ್ಷಕ್ಕೆ ನಾಲ್ಕೈದು ಬಾರಿ ವಿದ್ಯುತ್ ದರ ಹೆಚ್ಚಳ ಮಾಡುತ್ತಿದ್ದು, ವಿಪರೀತ ವಿದ್ಯುತ್ ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದರು.

ವಿದ್ಯುತ್ ದರ ಹೆಚ್ಚಳ ಖಂಡಿಸಿ ಮೆಸ್ಕಾಂ ಪ್ರಧಾನ ಕಚೇರಿ ಮುಂಭಾಗ ಪ್ರತಿಭಟನೆ

ಇಂದು ಬೆಳಗ್ಗೆ ನಗರದ ಬಿಜೈನಲ್ಲಿರುವ ಮೆಸ್ಕಾಂನ ಪ್ರಧಾನ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ ನಂತರ ಮಾತನಾಡಿದ ಅವರು, ಇಂದು ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. ಅದರ ಜೊತೆಗೆ ರಾಜ್ಯದ ಜನತೆಗೆ ವಿಪರೀತವಾಗಿ ವಿದ್ಯುತ್ ಬೆಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆಯ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಕೊಡುತ್ತಿಲ್ಲ. ವರ್ಷಕ್ಕೆ ನಾಲ್ಕೈದು ಬಾರಿ ವಿದ್ಯುತ್ ದರ ಹೆಚ್ಚಳ ಮಾಡಲಾಗುತ್ತಿದೆ. ಕೆಲ ತಿಂಗಳುಗಳ ಹಿಂದೆ ಬರುತ್ತಿದ್ದ ವಿದ್ಯುತ್ ದರಕ್ಕೂ, ಈಗ ಬರುತ್ತಿರುವ ವಿದ್ಯುತ್ ದರಕ್ಕೂ ತುಂಬಾ ವ್ಯತ್ಯಾಸವಿದೆ. ಇದರಿಂದ ಜನಸಾಮಾನ್ಯರು ಮಾತ್ರವಲ್ಲ ಎಲ್ಲಾ ವಿಭಾಗದ ಮಂದಿ ಕಂಗೆಟ್ಟಿದ್ದಾರೆ ಎಂದರು.

ವಿದ್ಯುತ್ ಬಿಲ್​ಗಳಲ್ಲಿ ತಪ್ಪು ಲೆಕ್ಕಾಚಾರಗಳನ್ನು ಹಾಕಿ‌ ಜನರಿಂದ ಮೆಸ್ಕಾಂ ಸುಲಿಗೆ ಮಾಡುತ್ತಿದೆ. ಇದನ್ನು ಖಂಡಿಸಿ ಮೆಸ್ಕಾಂನ ಒಂದೊಂದು ಉಪ ಕಚೇರಿಯ ಮುಂಭಾಗವೂ ಪ್ರತಿಭಟನೆ ನಡೆಸಲಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಕೊಡಬೇಕು ಎಂದು ಸುನೀಲ್ ಕುಮಾರ್ ಬಜಾಲ್ ಆಗ್ರಹಿಸಿದರು.

ಈ ಸಂದರ್ಭ ದಯಾನಂದ ಶೆಟ್ಟಿ, ಬಶೀರ್, ಅಜ್ಗರ್, ಜಯಂತಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Intro:ಮಂಗಳೂರು: ಇಂದಿನ ವಿಪರೀತ ವಿದ್ಯುತ್ ದರ ಏರಿಕೆಯಿಂದ ಜನಸಾಮಾನ್ಯರು ಮಾತ್ರವಲ್ಲ, ಕೆಳವರ್ಗದ, ಮಧ್ಯಮವರ್ಗದ ಅದರ ಮೇಲ್ಮಟ್ಟ ಜನರೂ ಕಂಗೆಟ್ಟಿದ್ದಾರೆ. ಮೆಸ್ಕಾಂ ನಿರಂತರವಾಗಿ ವರ್ಷಕ್ಕೆ ನಾಲ್ಕೈದು ಬಾರಿ ವಿದ್ಯುತ್ ದರ ಹೆಚ್ಚಳ ಮಾಡುತ್ತಿದ್ದು, ಅಲ್ಲದೆ ಹೆಚ್ಚುವರಿ ಡೆಪಾಸಿಟ್ ಹೇರುವ ಮೂಲಕ ಹಗಲು ದರೋಡೆ ನಡೆಸುತ್ತಿದ್ದಾರೆ. ಇದರಿಂದ ಜನತೆ ಆಕ್ರೋಶಿತರಾಗಿದ್ದು, ಕೂಡಲೆ ಮೆಸ್ಕಾಂ ಏರಿಕೆ ಮಾಡಿದ ವಿದ್ಯುತ್ ದರವನ್ನು ಹಾಗೂ ನಿಯಮಬಾಹಿರ ಲೆಕ್ಕಾಚಾರಗಳನ್ನು ಕೈಬಿಡಬೇಕೆಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದರು.

ಮೆಸ್ಕಾಂನ ಅವ್ಯವಸ್ಥೆಗಳ ವಿರುದ್ಧ ಇಂದು ಬೆಳಗ್ಗೆ ನಗರದ ಬಿಜೈನಲ್ಲಿರುವ ಮೆಸ್ಕಾಂನ ಪ್ರಧಾನ ಕಚೇರಿಯ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇಂದು ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರಿಗೆ ದಿನ ಸಾಗಿಸಲಾರದಂಥಹ ಪರಿಸ್ಥಿತಿ ಉದ್ಭವವಾಗಿದೆ. ಅದರ ಜೊತೆಗೆ ಕರ್ನಾಟಕ ರಾಜ್ಯದ ಜನತೆಗೆ ವಿಪರೀತವಾದ ವಿದ್ಯುತ್ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಲೆಬೇರಿಕೆಯ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಕೊಡುತ್ತಿಲ್ಲ‌‌. ಕಾರಣ ಯುನಿಟ್ ಗೆ ವರ್ಷಕ್ಕೆ ನಾಲ್ಕೈದು ಬಾರಿ ಆಗಿಂದಾಗ್ಗೆ ವಿದ್ಯುತ್ ದರ ಹೆಚ್ಚಳ ಮಾಡಲಾಗುತ್ತಿದೆ. ಕೆಲವೇ ತಿಂಗಳುಗಳ ಹಿಂದೆ ಮನೆಗೆ ಬರುತ್ತಿದ್ದ ವಿದ್ಯುತ್ ದರಕ್ಕೂ ಈಗ ಬರುತ್ತಿರುವ ವಿದ್ಯುತ್ ದರಕ್ಕೂ ಎಷ್ಟು ವ್ಯತ್ಯಾಸವಿದೆ ಎಂದರೆ 200-300 ರೂ.ನಷ್ಟು ಬರುತ್ತಿದ್ದ ಬಿಲ್ ಇಂದು 1000-1500 ಸಾವಿರ ರೂ‌. ನಷ್ಟು ಬರುತ್ತಿದೆ. ಇದರಿಂದ ಜನಸಾಮಾನ್ಯರು ಮಾತ್ರ ಅಲ್ಲ ಎಲ್ಲಾ ವಿಭಾಗದ ಮಂದಿ ಕಂಗೆಟ್ಟಿದ್ದಾರೆ ಎಂದು ಸುನೀಲ್ ಕುಮಾರ್ ಬಜಾಲ್ ಹೇಳಿದರು

Body:ಅಲ್ಲದೆ ಮೆಸ್ಕಾಂ ಕೇಳುವ ಹೆಚ್ಚುವರಿ ಡೆಪಾಸಿಟ್ ನ್ನು ಕೆಲವು ವರ್ಷಗಳ ಹಿಂದೆ ನಮ್ಮ ಸಿಪಿಐಎಂ, ಯುವ ಜನ‌ ಸಂಘಟನೆ ಹಾಗೂ ಡಿವೈಎಫ್ ಐ ಸಂಘಟನೆ ವಿರೋಧಿಸಿ, ನಿರಂತರವಾಗಿ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ನಿಲ್ಲಿಸಲು ಸಾಧ್ಯವಾಯಿತು. ಆ ಬಳಿಕ ಜನತೆಯ ದಾರಿ ತಪ್ಪಿಸಿ, ಒಂದು ಪ್ರದೇಶದ ಎರಡು ಮನೆಗಳಿಗೆ ಮಾತ್ರ ಡೆಪಾಸಿಟ್ ಕಟ್ಟುವಂತೆ ಮಾಡಿ, ಜನತೆಯ ಮಧ್ಯೆ ಒಡಕು ಮೂಡುವಂತೆ ಮಾಡಿದರು. ಇದರಿಂದ ಯಾರೂ ಪ್ರತಿಭಟನೆ ಮಾಡುವುದಿಲ್ಲ. ಬಳಿಕ ಇನ್ನೆರಡು ಮನೆಗಳಿಗೆ ಇದೇ ರೀತಿ ಮಾಡಿದರು‌ ಹೀಗೆ ಮೆಸ್ಕಾಂ ನಿರಂತರವಾಗಿ ಡೆಪಾಸಿಟ್ ಕಟ್ಟುವಂತೆ ಮಾಡಿ ಕುತಂತ್ರ ಮಾಡಿತು. ನೀವು ಡೆಪಾಸಿಟ್ ಕಟ್ಟದಿದ್ದರೆ ನಿಮ್ಮ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಫ್ಯೂಸ್ ತೆಗೆಯಲಾಗುತ್ತದೆ ಎಂದು ಧಮ್ಕಿ ಹಾಕಲಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ವಿದ್ಯುತ್ ಬಿಲ್ ಗಳಲ್ಲಿ ತಪ್ಪು ಲೆಕ್ಕಾರಗಳನ್ನು ಹಾಕಿ‌ ಜನರಿಂದ ಮೆಸ್ಕಾಂ ಹಣವನ್ನು ಸುಲಿಗೆ ಮಾಡುತ್ತಿದೆ. ಇದನ್ನು ಖಂಡಿಸಿ ಮೆಸ್ಕಾಂ ನ ಒಂದೊಂದು ಉಪಕಚೇರಿಯ ಮುಂಭಾಗ ಇಂದು ಪ್ರತಿಭಟನೆ ನಡೆಸಲಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಕೊಡಲಿ ಎಂದು ಸುನೀಲ್ ಕುಮಾರ್ ಬಜಾಲ್ ಆಗ್ರಹಿಸಿದರು.

ಈ ಸಂದರ್ಭ ಮಾಜಿ ಮನಪಾ ಸದಸ್ಯ ದಯಾನಂದ ಶೆಟ್ಟಿ, ಬಶೀರ್, ಅಜ್ಗರ್, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.