ETV Bharat / city

ಮಂಗಳೂರಿನ ನಂದಿನಿ ಡೈರಿಯಲ್ಲಿ ಟ್ಯಾಂಕ್ ಸ್ಫೋಟ: ಓರ್ವನಿಗೆ ಗಾಯ - ಮಂಗಳೂರು ಅಪ್​ಡೇಟ್

ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ ಡೈರಿಯಲ್ಲಿ ಟ್ಯಾಂಕ್ ಸ್ಫೋಟಗೊಂಡು, ಓರ್ವ ಗಾಯಗೊಂಡಿದ್ದಾನೆ.

ಮಂಗಳೂರಿನ ನಂದಿನಿ ಡೈರಿಯಲ್ಲಿ ಟ್ಯಾಂಕ್ ಸ್ಪೋಟ
ಮಂಗಳೂರಿನ ನಂದಿನಿ ಡೈರಿಯಲ್ಲಿ ಟ್ಯಾಂಕ್ ಸ್ಪೋಟ
author img

By

Published : Dec 15, 2020, 10:04 PM IST

ಮಂಗಳೂರು: ಇಲ್ಲಿನ ಕುಲಶೇಖರದಲ್ಲಿರುವ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ ಡೈರಿಯಲ್ಲಿ ಸ್ವಚ್ಛಗೊಳಿಸುವಾಗ ಟ್ಯಾಂಕ್ ಸ್ಫೋಟಗೊಂಡು ಓರ್ವ ಗಾಯಗೊಂಡಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸತೀಶ್ (27 ) ಗಾಯಗೊಂಡವರು. ಇವರನ್ನು ‌ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. (ಇದನ್ನೂ ಓದಿ: ಪುತ್ತೂರಿನ ಕೋಡಿಂಬಾಡಿಯಲ್ಲಿ ಮತ್ತೆ ಚಿರತೆ ಓಡಾಟ: ಸಿಸಿಟಿವಿಯಲ್ಲಿ ದೃಶ್ಯ ಸೆರೆ)

ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಟ್ಯಾಂಕ್ ಸ್ವಚ್ಛಗೊಳಿಸು ಕಾರ್ಯವನ್ನು ಬೆಂಗಳೂರಿನ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಸತೀಶ್ ಆ ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ಉದ್ಯೋಗಿಯಾಗಿದ್ದಾರೆ. ಸೋಡಾ ಮಾದರಿಯ ವಸ್ತುವನ್ನು ಬೆರೆಸಿ ಟ್ಯಾಂಕ್ ಸ್ವಚ್ಛಗೊಳಿಸುವಾಗ ಸ್ಫೋಟ ಸಂಭವಿಸಿ, ಬಿಸಿ ನೀರು ಸತೀಶ್ ಮೇಲೆ ಬಿದ್ದಿದೆ. ಪರಿಣಾಮವಾಗಿ ಅವರ ದೇಹದ ಅರ್ಧದಷ್ಟು ಸುಟ್ಟು ಹೋಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.