ಸುಬ್ರಹ್ಮಣ್ಯ: ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆಯಾಗಿ ಕುಮಾರಿ ಗಾನಶ್ರೀ ಕರ್ಲಪ್ಪಾಡಿ ಆಯ್ಕೆಯಾಗಿದ್ದಾರೆ.
ಸುವಿಚಾರ ಸಾಹಿತ್ಯ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಇದೇ ನವೆಂಬರ್ 1ರಂದು ನಡೆಯಲಿರುವ ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆಯಾಗಿ ಕುಮಾರಿ ಗಾನಶ್ರೀ ಅವರು ಆಯ್ಕೆಯಾಗಿದ್ದಾರೆ.
ಅರಂತೋಡು ಎನ್ಎಂಸಿ ಪಿಯು ಕಾಲೇಜು ವಿದ್ಯಾರ್ಥಿನಿಯಾದ ಗಾನಶ್ರೀ, ಕಡಬದ ಪೊಲೀಸ್ ಠಾಣಾ ಹೆಡ್‍ಕಾನ್ಸ್ಟೇಬಲ್ ಚಿನ್ನಪ್ಪ ಕರ್ಲಪ್ಪಾಡಿ ಹಾಗೂ ಕಲಾ ದಂಪತಿಯ ದ್ವಿತೀಯ ಪುತ್ರಿಯಾಗಿದ್ದಾರೆ.