ETV Bharat / city

ಕೆಎಸ್​​ಆರ್​​ಟಿಸಿ ಬಸ್ -ಬೈಕ್ ಮುಖಾಮುಖಿ : ಬೆಳ್ತಂಗಡಿಯಲ್ಲಿ ಸಹೋದರರಿಬ್ಬರ ದಾರುಣ ಸಾವು! - KSRTC Bus -Bike collision two brothers died

ಧರ್ಮಸ್ಥಳದಿಂದ ಉಡುಪಿ ಕಡೆ ಚಲಿಸುತಿದ್ದ ಕೆಎಸ್​​ಆರ್​​ಟಿಸಿ ಬಸ್​ಗೆ ವೇಣೂರಿನಿಂದ ಗುರುವಾಯನಕೆರೆ ಕಡೆ ಬರುತಿದ್ದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಸವಾರರಿಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ..

Road Accident at Belthangady
ಬೆಳ್ತಂಗಡಿಯಲ್ಲಿ ರಸ್ತೆ ಅಪಘಾತ
author img

By

Published : Mar 18, 2022, 7:16 PM IST

ಬೆಳ್ತಂಗಡಿ : ತಾಲೂಕಿನ ಗರ್ಡಾಡಿ ಸಮೀಪದ‌ ನಂದಿಬೆಟ್ಟ ಸಮೀಪ ದ್ವಿಚಕ್ರ ವಾಹನಕ್ಕೆ ಕೆಎಸ್​​ಆರ್​​ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್​​ ಸವಾರರಿಬ್ಬರೂ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಮೃತರನ್ನು ಉಪ್ಪಿನಂಗಡಿ ಸಮೀಪದ ಹಿರೇಬಂಡಾಡಿಯ ನಿವೃತ್ತ ಶಿಕ್ಷಕ ಮಹ್ರೂಮ್ ಅಬ್ದುಲ್ ರಝಾಕ್ ಅವರ ಪುತ್ರರಾದ ಹಮ್ಮಬ್ಬ ಸಿರಾಜ್ ಮತ್ತು ಕತುಬುದ್ಧಿನ್ ಸಾದಿಕ್ ಎಂದು ಗುರುತಿಸಲಾಗಿದೆ.

ಧರ್ಮಸ್ಥಳದಿಂದ ಉಡುಪಿ ಕಡೆ ಚಲಿಸುತಿದ್ದ ಕೆಎಸ್​​ಆರ್​​ಟಿಸಿ ಬಸ್​ಗೆ ವೇಣೂರಿನಿಂದ ಗುರುವಾಯನಕೆರೆ ಕಡೆ ಬರುತಿದ್ದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಸವಾರರಿಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇನ್ನೋರ್ವನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರು ಗುರುವಾರ ಅನಾರೋಗ್ಯದಿಂದ ಮೃತಪಟ್ಟ ಅಣ್ಣನ ಮಗನ ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ಭಾನುವಾರ ನವೀನ್ ಮೃತದೇಹ ತಾಯ್ನಾಡಿಗೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.