ಸುಬ್ರಹ್ಮಣ್ಯ (ದ.ಕನ್ನಡ): ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಂಚಮಿ ಉತ್ಸವ ಹಾಗೂ ಚಂಪಾಷಷ್ಠಿ ಉತ್ಸವಗಳು ಸಂಭ್ರಮದಿಂದ ನಡೆಯಿತು.
ಬುಧವಾರ ಮಧ್ಯಾಹ್ನ ಪಲ್ಲಪೂಜೆ, ರಾತ್ರಿ ವಿಶೇಷ ಪಾಲಕಿ ಮತ್ತು ಬಂಡಿ ಉತ್ಸವಗಳು ದೇವಳದ ಹೊರಾಂಗಣದಲ್ಲಿ ಜರುಗಿತು. ಬಳಿಕ ಪಂಚಮಿ ತೇರು ಉತ್ಸವ, ಸವಾರಿ ಕಟ್ಟೆಯಲ್ಲಿ ಕಟ್ಟೆಪೂಜೆ ಅದ್ಧೂರಿಯಾಗಿ ನಡೆಯಿತು. ಗುರುವಾರ ಬೆಳಗ್ಗೆ 6.58ರ ವೃಶ್ಚಿಕ ಲಗ್ನ ಶುಭ ಮೂಹೂರ್ತದಲ್ಲಿ ಕುಕ್ಕೆಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೂಢರಾದರು. ಆ ಬಳಿಕ ವಿವಿಧ ವಿಶೇಷ ವೈದಿಕ ಕಾರ್ಯದ ನಂತರ ಬ್ರಹ್ಮರಥೋತ್ಸವ ಸಂಭ್ರಮದಿಂದ ನಡೆಯಿತು.
ಕಾರ್ತಿಕ ಶುದ್ಧ ಷಷ್ಠಿಯ ದಿನದಂದು ಈ ವಿಶೇಷ ಉತ್ಸವಗಳು ನಡೆಯುತ್ತದೆ. ಬೆಳಗ್ಗೆ 6.58ರ ವೃಶ್ಚಿಕ ಲಗ್ನದಲ್ಲಿ ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ಹಾಗೂ ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ ಆರೂಢರಾದರು. ಬಳಿಕ ವಿವಿಧ ವೈದಿಕ ಕಾರ್ಯ ನಡೆದು ಸುವರ್ಣ ವೃಷ್ಠಿಯಾಗಿ, ಪಂಚಮಿ ತೇರನ್ನು ಮೊದಲು ಎಳೆಯಲಾಯಿತು. ನಂತರ ಮಹಾರಥೋತ್ಸವವು ನಡೆಯಿತು. ಸಾವಿರಾರು ಭಕ್ತರು ಈ ಕ್ಷಣಗಳಿಗೆ ಸಾಕ್ಷಿಯಾದರು.
ಇದನ್ನೂ ಓದಿ: ಒಮಿಕ್ರಾನ್ ಮುನ್ನೆಚ್ಚರಿಕೆ: ಸುತ್ತೂರು ಜಾತ್ರೆ ಸರಳ, ಸಂಪ್ರದಾಯಕ್ಕೆ ಸೀಮಿತ