ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದು ಹೋಗಿದ್ದ ಮಹಿಳೆಯೊಬ್ಬರ ಚಿನ್ನ ವಜ್ರ ಮಿಶ್ರಿತ ಬಳೆ ಟ್ರಾಲಿ ರಿಟ್ರಿವರ್ ಸಿಬ್ಬಂದಿಯ ಮೂಲಕ ಮತ್ತೆ ಅವರ ಕೈ ಸೇರಿದೆ. ಬೆಂಗಳೂರಿನಿಂದ ಬಂದಿದ್ದ ಸಂಬಂಧಿಯನ್ನು ಕರೆದುಕೊಂಡು ಹೋಗಲು ಮಹಿಳೆಯೊಬ್ಬರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರು ತಮ್ಮ ವಜ್ರದ ಬಳೆಯನ್ನು ಕಳೆದುಕೊಂಡಿದ್ದರು.
ಮನೆಗೆ ತೆರಳಿದ ಬಳಿಕ ತಮ್ಮ ಬಳೆ ಕಳೆದು ಹೋಗಿರುವುದು ಇವರ ಗಮನಕ್ಕೆ ಬಂದಿತ್ತು. ಕೂಡಲೇ ಅವರು ಬೆಂಗಳೂರಿನಿಂದ ಬಂದಿದ್ದ ತಮ್ಮ ಸಂಬಂಧಿಗೆ ವಿಷಯ ತಿಳಿಸಿದ್ದಾರೆ. ಅವರು ಕೂಡಲೇ ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಇಂಜಿನಿಯರ್ ಅಪಹರಣ ಪ್ರಕರಣ: ಮೂರು ಗಂಟೆಯಲ್ಲೇ 6 ಮಂದಿ ಬಂಧನ
ಈ ವಜ್ರದ ಬಳೆ ಆಗಲೇ ಟ್ರಾಲಿ ರಿಟ್ರಿವರ್ ಸಿಬ್ಬಂದಿ ಅಶ್ರಫ್ ಮೊಯ್ದೀನ್ ಅವರಿಗೆ ಟರ್ಮಿನಲ್ನ ಕೆಳಮಹಡಿಯ ನಿರ್ಗಮನ ಭಾಗದಲ್ಲಿ ಸಿಕ್ಕಿತ್ತು. ಅವರು ಅದನ್ನು ಕೂಡಲೇ ಭದ್ರತಾ ತಂಡಕ್ಕೆ ಹಸ್ತಾಂತರಿಸಿದ್ದರು. ವಜ್ರದ ಬಳೆ ಕಳೆದು ಹೋದ ದೂರಿನ ಮೇರೆಗೆ ಟರ್ಮಿನಲ್ ಮ್ಯಾನೇಜರ್ ಅವರು ಭದ್ರತಾ ತಂಡಕ್ಕೆ ತಿಳಿಸಿದ್ದಾರೆ. ಅದು ಈಗಾಗಲೇ ಸಿಕ್ಕಿರುವ ವಜ್ರದ ಬಳೆ ಎಂಬುದು ಖಚಿತವಾಗಿತ್ತು. ಬಳಿಕ ಇದನ್ನು ಅಶ್ರಫ್ ಅವರ ಮೂಲಕ ಬಳೆ ಕಳೆದುಕೊಂಡ ಮಹಿಳೆಗೆ ಹಸ್ತಾಂತರಿಸಲಾಯಿತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇದು ಅಶ್ರಫ್ ಅವರು ವಿಮಾನ ನಿಲ್ದಾಣದಲ್ಲಿ ಸಿಕ್ಕ ಬೆಳೆಬಾಳುವ ವಸ್ತುವನ್ನು ಹಸ್ತಾಂತರಿಸಿದ ಎರಡನೇ ಘಟನೆಯಾಗಿದೆ.