ETV Bharat / city

ದಿಗ್ವಿಜಯ್ ಸಿಂಗ್ ಅನಧಿಕೃತ ಬಂಧನ ಖಂಡನೀಯ: ಯು.ಟಿ.ಖಾದರ್

ವಿಧಾನಸಭೆಯಲ್ಲಿ ಸಂವಿಧಾನ ಉಳಿಸುವ ಬಗ್ಗೆ ಚರ್ಚೆ ನಡೆಸುತ್ತೇವೆ. ಆದರೆ, ಹೊರಗಡೆ ಸಂವಿಧಾನ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಅಂದು ಡಿ.ಕೆ.ಶಿವಕುಮಾರ್​ ಮುಂಬೈಗೆ ಹೋದಾಗ ಕೂಡಾ ಇದೇ ಪರಿಸ್ಥಿತಿ ಎದುರಾಗಿತ್ತು. ಇಂದು ಜನಮತ ಗೆದ್ದ ಸರ್ಕಾರವನ್ನು ಪತನಗೊಳಿಸಲಾಗುತ್ತಿದೆ ಎಂದು ಮಾಜಿ ಸಚಿವ ಖಾದರ್​ ಕಿಡಿಕಾರಿದರು.

digvijay-singh-unauthorized-detention
ಯು.ಟಿ.ಖಾದರ್
author img

By

Published : Mar 18, 2020, 8:35 PM IST

ಮಂಗಳೂರು: ದಿಗ್ವಿಜಯ್​​​ ಸಿಂಗ್​​ ಅವರನ್ನು ಅನಧಿಕೃತವಾಗಿ ಬಂಧಿಸಿದ್ದು ಖಂಡನೀಯ. ಇದನ್ನು ನೋಡಿದರೆ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿದ್ದೇವಾ? ಎಂಬ ಪ್ರಶ್ನೆ ಮೂಡುತ್ತದೆ ಎಂದು ಶಾಸಕ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಸಕರನ್ನು ಭೇಟಿಯಾಗಲು ಬಂದರೆ ಮುಖ್ಯಮಂತ್ರಿಗೆ ಏನಾಗುತ್ತದೆ? ಎಂದು ಪ್ರಶ್ನಿಸಿದರು. ಜೊತೆಗೆ ಇದು ಸಂವಿಧಾನಕ್ಕೆ ವಿರೋಧವಾದ ನಡವಳಿಕೆ ಎಂದು ಗುಡುಗಿದರು.

ಶಾಸಕ ಯು.ಟಿ.ಖಾದರ್​

ಕೊರೊನಾ ಸೋಂಕು ಹರಡದಂತೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಜನ ಸಹಕಾರ ನೀಡಬೇಕು. ಸ್ವಯಂ ನಿಯಂತ್ರಣದಿಂದ ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ಉತ್ತರ ಕರ್ನಾಟಕದ ಬಸ್‌ಗಳನ್ನು ಕೆಲ ದಿನಗಳ ಮಟ್ಟಿಗೆ ನಿರ್ಬಂಧಿಸಬೇಕು. ಬಸ್​, ರೈಲು, ವಿಮಾನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಬೇಕು ಎಂದರು.

ಜನವಸತಿ ಕಡೆ ಪ್ರತ್ಯೇಕ ವಾರ್ಡ್​ಗಳನ್ನು ಸ್ಥಾಪಿಸುವುದಿಲ್ಲ ಎಂದ ಅವರು, ಕೊರೊನಾದಿಂದ ದುಡಿಯುವ ವರ್ಗಕ್ಕೆ ಸಮಸ್ಯೆ ಉಂಟಾಗಿರುವುದು ನಿಜ. ಹಾಗಾಗಿ ತಿಂಗಳ ಬಾಡಿಗೆಯನ್ನು ಸ್ವಲ್ಪ ಕಡಿಮೆ ಮಾಡಬೇಕು. ಸರ್ಕಾರ ಕೂಡ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.