ETV Bharat / city

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ : 445 ವಿದ್ಯಾರ್ಥಿಗಳಿಗೆ 600 ಅಂಕ - ಪಿಯುಸಿ ಫಲಿತಾಂಶದಲ್ಲಿ ದಕ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ

ನಗರ ಪ್ರದೇಶದಲ್ಲಿ 11,078 ಬಾಲಕರು, 10,921 ಬಾಲಕಿಯರು, ಗ್ರಾಮೀಣ ಭಾಗದಲ್ಲಿ 5,277 ಬಾಲಕರು ಮತ್ತು 5,066 ಬಾಲಕಿಯರು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ..

dakshina-kannada-district-in-puc-result-first-in-the-state
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ
author img

By

Published : Jul 20, 2021, 10:05 PM IST

ಮಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ದ.ಕ. ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯ 445 ವಿದ್ಯಾರ್ಥಿಗಳು 600 ಅಂಕಕ್ಕೆ 600 ಅಂಕ ಪಡೆದಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಒಟ್ಟು 31,299 ಮಂದಿ ಫ್ರೆಶರ್ಸ್ ಹಾಗೂ 1043 ರಿಪೀಟರ್ಸ್ ಸೇರಿದಂತೆ 32,342 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೊರೊನಾ ಕಾರಣದಿಂದ ಎಲ್ಲರನ್ನೂ ಪಾಸ್ ಮಾಡಲಾಗಿದೆ.

ಇವರಲ್ಲಿ 16,355 ವಿದ್ಯಾರ್ಥಿಗಳಾಗಿದ್ದು, 15,987 ವಿದ್ಯಾರ್ಥಿನಿಯರಾಗಿದ್ದಾರೆ. ಜಿಲ್ಲೆಯಲ್ಲಿ 27,761 ಮಂದಿ ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಎದುರಿಸಿದ್ದರೆ, ಕನ್ನಡದಲ್ಲಿ 4,581 ಮಂದಿ ಪರೀಕ್ಷೆ ಬರೆದಿದ್ದಾರೆ.

ನಗರ ಪ್ರದೇಶದಲ್ಲಿ 11,078 ಬಾಲಕರು, 10,921 ಬಾಲಕಿಯರು, ಗ್ರಾಮೀಣ ಭಾಗದಲ್ಲಿ 5,277 ಬಾಲಕರು ಮತ್ತು 5,066 ಬಾಲಕಿಯರು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.