ETV Bharat / city

ಧರ್ಮದ ಹೆಸರಿನಲ್ಲಿ ನಡೆದ ಹತ್ಯೆಗಳಲ್ಲಿ ಕೈ ಕಾರ್ಯಕರ್ತರು ಆರೋಪಿಗಳಲ್ಲ : ರಮಾನಾಥ ರೈ

ಪಂಚಾಯತ್ ಅಧ್ಯಕ್ಷ ಜಲೀಲ್ ಕರೋಪಾಡಿ, ಶರತ್ ಮಡಿವಾಳ, ಅಶ್ರಫ್, ನಜೀರ್ ಮುಂತಾದವರು ಧರ್ಮಾಧರಿತ ಹತ್ಯೆಯಲ್ಲಿ ಮೃತರಾದವರು‌. ನಾನು ಮತ್ತೆ ಮತ್ತೆ ಹೇಳುತ್ತೇನೆ ಕಾಂಗ್ರೆಸ್ ಪಕ್ಷದ ಹಿಂದೂ ಕಾರ್ಯಕರ್ತನಾಗಲಿ, ಮುಸ್ಲಿಂ ಕಾರ್ಯಕರ್ತನಾಗಲಿ ಅಂದು ನಡೆದಿರುವ ಈ ಹತ್ಯೆಗಳಲ್ಲಿ ಆರೋಪಿಗಳಲ್ಲ ಎಂದರು. ಕಟೀಲು ಅವರು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ..

author img

By

Published : Sep 19, 2020, 5:41 PM IST

Congress activists are not guilty of killings in the name of religion: Ramanatha Rai
ಧರ್ಮದ ಹೆಸರಿನಲ್ಲಿ ನಡೆದ ಹತ್ಯೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಗಳಲ್ಲ: ರಮಾನಾಥ ರೈ

ಮಂಗಳೂರು:‌ ಹಿಂದೆ ಕಾಂಗ್ರೆಸ್ ಸರ್ಕಾರ ಇರುವಾಗ ಬಹಳಷ್ಟು ಹತ್ಯೆಗಳಾಗಿವೆ ಎಂದು ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ. ಅಂದು ಧರ್ಮದ ಹೆಸರಿನಲ್ಲಿ ನಡೆದ ಹತ್ಯೆಯಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಎಫ್ಐಆರ್ ದಾಖಲಾಗಿಲ್ಲ ಎಂದು‌ ಮಾಜಿ ಸಚಿವ ರಮಾನಾಥ ರೈ ಸ್ಪಷ್ಟಪಡಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಹತ್ಯೆಗಳಲ್ಲಿ ಆರೋಪಿಗಳು ಯಾರು, ಎಫ್ಐಆರ್ ಯಾರ ಮೇಲೆ ಆಗಿದೆ ಎಂದು ನಳಿನ್ ಕುಮಾರ್ ಉತ್ತರಿಸಲಿ. ಎರಡು ಮತೀಯ ಸಂಘಟನೆಗಳ ಸದಸ್ಯರು ಆರೋಪಿಗಳ ಸ್ಥಾನಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮುಸ್ಲಿಂ ಸಂಘಟನೆಯ ಪಕ್ಷ ಹಾಗೂ ಈಗಿನ ಆಡಳಿತ ಪಕ್ಷದ ಸದಸ್ಯರು ಈ ಹತ್ಯೆಗಳಲ್ಲಿ ಗುರುತಿಸಿಕೊಂಡಿದ್ದು, ಇವರಿಗೆ ವಕಾಲತ್ತು ಮಾಡಿರೋದು ಆ ಸಂಘಟನೆಗಳೇ ಎಂದು ಆರೋಪಿಸಿದರು.

ಟಿಪ್ಪು ಸುಲ್ತಾನ್ ಜಯಂತಿಯ ಹಿನ್ನೆಲೆ, ಜಿಲ್ಲೆಯಲ್ಲಿ ಕೋಮು ಸಂಘರ್ಷ ಆಗಲೆಂದು ಬಂಟ್ವಾಳದಲ್ಲಿ ಹರೀಶ್ ಪೂಜಾರಿಯ ಹತ್ಯೆ ಮಾಡಲಾಯಿತು. ಆ ಬಳಿಕ ಆತ ಮುಸ್ಲಿಂ ಎಂದು ನಾವು ಹತ್ಯೆ ಮಾಡಿರೋದು ಎಂದು ಹತ್ಯೆ ಮಾಡಿದವರೇ ಹೇಳಿರೋದು ನಮಗೆ ತಿಳಿದಿದೆ. ಈ ಹತ್ಯೆಯಲ್ಲಿ ರೋಪಿಗಳಾಗಿದ್ದವರು ಈಗ ಹಿಂದೂ ಸಂಘಟನೆಯ ಪ್ರಮುಖ ಪದಾಧಿಕಾರಿಗಳಾಗಿ ಗುರುತಿಸಿಕೊಂಡಿದ್ದಾರೆ.

ಪಂಚಾಯತ್ ಅಧ್ಯಕ್ಷ ಜಲೀಲ್ ಕರೋಪಾಡಿ, ಶರತ್ ಮಡಿವಾಳ, ಅಶ್ರಫ್, ನಜೀರ್ ಮುಂತಾದವರು ಧರ್ಮಾಧರಿತ ಹತ್ಯೆಯಲ್ಲಿ ಮೃತರಾದವರು‌. ನಾನು ಮತ್ತೆ ಮತ್ತೆ ಹೇಳುತ್ತೇನೆ ಕಾಂಗ್ರೆಸ್ ಪಕ್ಷದ ಹಿಂದೂ ಕಾರ್ಯಕರ್ತನಾಗಲಿ, ಮುಸ್ಲಿಂ ಕಾರ್ಯಕರ್ತನಾಗಲಿ ಅಂದು ನಡೆದಿರುವ ಈ ಹತ್ಯೆಗಳಲ್ಲಿ ಆರೋಪಿಗಳಲ್ಲ ಎಂದರು. ಕಟೀಲು ಅವರು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ.

ವೃಥಾ ಆರೋಪ ಮಾಡಬಾರದು. ಅವರಿಗೆ ಕನಿಷ್ಠ ಜ್ಞಾನದ ಕೊರತೆಯಿದೆ‌. ಡಾಲರ್​ಗೆ ಮೌಲ್ಯ ಹೆಚ್ಚೋ ಅಥವಾ ರೂಪಾಯಿಗೆ ಮೌಲ್ಯ ಹೆಚ್ಚೋ ಎಂಬುದು ಅವರಿಗೆ ತಿಳಿದಿಲ್ಲ. ಆದ್ದರಿಂದ ಬಾಲಿಶವಾದ ಮಾತುಗಳನ್ನಾಡಿ ಹೆಸರು ಕೆಡಿಸುವಂತಹ ಕೆಲಸವನ್ನು ಅವರು ಮೊದಲು ನಿಲ್ಲಿಸಲಿ. ಡಿಜೆಹಳ್ಳಿ ಗಲಭೆ, ಎನ್ಆರ್​ಸಿ ಗಲಭೆ, ಗುಜರಾತ್ ಗಲಭೆಗಳು ನಡೆದಾಗ ಯಾರ ಸರ್ಕಾರ ಇದ್ದಿದ್ದು, ಇವರದೇ ಸರ್ಕಾರವಲ್ಲವೇ ಎಂದು ಪ್ರಶ್ನಿಸಿದರು.

2 ಸಾವಿರ ರೂ.ಗೆ ಮರಳು ದೊರಕಿದರೆ ಸಂತೋಷ: ನಳಿನ್ ಕುಮಾರ್ ಹೇಳಿದಂತೆ ಜಿಲ್ಲೆಯಲ್ಲಿ 2 ಸಾವಿರ ರೂ.ಗೆ ಮರಳು ದೊರಕಿದರೆ ನಮಗೆ ಸಂತೋಷ. ಆದರೆ, ಪ್ರಧಾನಿ ಮೋದಿಯವರು 15 ಲಕ್ಷ ರೂ. ಖಾತೆಗೆ ಹಾಕುವೆ ಎಂದು ಹೇಳಿದಂತಾಗಬಾರದು ಎಂದು ರಮಾನಾಥ ರೈ ಕಿಚಾಯಿಸಿದರು. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವಾಗ ಜಿಲ್ಲೆಯಲ್ಲಿ ಸಿಆರ್​ಝಡ್​ನಲ್ಲಿ ಸಂಪ್ರದಾಯ ಮರಳುಗಾರಿಕೆಗೆ ಪಕ್ಷ ಬೇಧವಿಲ್ಲದೆ, ಸೀನಿಯಾರಿಟಿ ಪ್ರಕಾರ 105 ಮಂದಿಗೆ ಪರವಾನಿಗೆ ನೀಡಲಾಗಿತ್ತು. ಆದರೆ, ನಳಿನ್ ಕುಮಾರ್ ಅವರು ಕಾಂಗ್ರೆಸ್ ಜೊತೆ ಇರುವವರು ಅಕ್ರಮ ಮರಳುಗಾರಿಕೆ ದಂಧೆ ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಇದು ಮರಳುಗಾರಿಕೆ ದಂಧೆಯಲ್ಲ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.