ETV Bharat / city

ಭಾವನೆಗಳಿಗೆ ಧಕ್ಕೆ ಆದಾಗ ಕ್ರಿಯೆ- ಪ್ರತಿಕ್ರಿಯೆ ಆಗುತ್ತದೆ; ನೈತಿಕ ಪೊಲೀಸ್ ಗಿರಿ ಬಗ್ಗೆ ಸಿಎಂ ಮಾತು

ಸಮಾಜದಲ್ಲಿ ನಾವೆಲ್ಲ ಜವಾಬ್ದಾರಿ ವಹಿಸಬೇಕು. ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕು. ಧಕ್ಕೆ ಬಂದಾಗ ಸಹಜವಾಗಿ ಕ್ರಿಯೆ, ಪ್ರತಿಕ್ರಿಯೆ ಆಗುತ್ತದೆ ಎಂದು ಸಿಎಂ ಬೊಮ್ಮಾಯಿ ಮಂಗಳೂರಿನ ನೈತಿಕ ಪೊಲೀಸ್ ಗಿರಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

cm basavaraja bomma
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Oct 13, 2021, 12:40 PM IST

ಮಂಗಳೂರು: ಜನರ ಭಾವನೆಗಳಿಗೆ ಧಕ್ಕೆಯಾದಾಗ ಸಹಜವಾಗಿ ಕ್ರಿಯೆ, ಪ್ರತಿಕ್ರಿಯೆಗಳು ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿನ ನೈತಿಕ ಪೊಲೀಸ್ ಗಿರಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಎಂ ಪ್ರತಿಕ್ರಿಯೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ಸೂಕ್ಷ್ಮ ವಿಚಾರ. ಸಮಾಜದಲ್ಲಿ ನಾವೆಲ್ಲ ಜವಾಬ್ದಾರಿ ವಹಿಸಬೇಕು. ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕು. ಧಕ್ಕೆ ಬಂದಾಗ ಸಹಜವಾಗಿ ಕ್ರಿಯೆ- ಪ್ರತಿಕ್ರಿಯೆ ಆಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಎಲ್ಲರೂ ಸಹಕಾರ ಕೊಡಬೇಕು. ಯುವಕರು ಸಮಾಜದ ಭಾವನೆಗೆ ಧಕ್ಕೆ ಆಗದಂತೆ ವರ್ತಿಸಬೇಕು. ಸಾಮಾಜಿಕ ಪ್ರಶ್ನೆ ಇದು. ಸಮಾಜದಲ್ಲಿ ನೈತಿಕತೆ ಬೇಕು, ನೈತಿಕತೆ ಇಲ್ಲದೇ ಬದುಕಲು ಸಾಧ್ಯವಿಲ್ಲ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಹೊಣೆಗಾರಿಕೆ ಇದೆ ಎಂದು ಹೇಳಿದರು.

ಖಾಸಗಿ ಹೇಳಿಕೆಗಳಿಗೆ ಪ್ರತಿಕ್ರಿಯೆ ಇಲ್ಲ:

ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾಜಿ ಸಂಸದ ಉಗ್ರಪ್ಪ ಮತ್ತು ಕಾಂಗ್ರೆಸ್​ ಮುಖಂಡ ಸಲೀಂ ಅವರು ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ‌ಅವರು ಯಾರದ್ದೋ ಖಾಸಗಿ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

2-3 ದಿನದಲ್ಲಿ 2 ರೇಕ್ ಕಲ್ಲಿದ್ದಲು ತರಿಸಲು ಪ್ರಯತ್ನ:

ಕಲ್ಲಿದ್ದಲು ಅಭಾವದ ಬಗ್ಗೆ ಪ್ರತಿಕ್ರಿಯಿಸಿ, ಕಳೆದ ವಾರ ನಮಗೆ 8 ರೇಕ್ ಕಲ್ಲಿದ್ದಲು ಬಂದಿತ್ತು. 10 ರೇಕ್ ಕಲ್ಲಿದ್ದಲು ಬರುತ್ತಿತ್ತು. ನಮಗೆ ಇನ್ನೂ 3 ರೇಕ್ ಕಲ್ಲಿದ್ದಲು ಬಂದರೆ ಸರಿಯಾಗುತ್ತದೆ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಿದ್ದೇವೆ. ಇದಕ್ಕಾಗಿ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಇನ್ನು ಎರಡ್ಮೂರು ದಿನಗಳಲ್ಲಿ 2 ರೇಕ್ ಕಲ್ಲಿದ್ದಲು ತರಿಸಲು ಪ್ರಯತ್ನಿಸುತ್ತೇವೆ ಎಂದು ಮಾಹಿತಿ ನೀಡಿದರು.

ಗಡಿಭಾಗದಲ್ಲಿ ನಿರ್ಬಂಧ ತೆರವು?

ಗಡಿಭಾಗದಲ್ಲಿ ನಿರ್ಬಂಧ ತೆರವಿನ ಬಗ್ಗೆ ದಸರಾ ಮುಗಿದ ಬಳಿಕ ನಿರ್ಧರಿಸಲಾಗುವುದು. ಈ ಬಗ್ಗೆ ಸಮಿತಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಗಡಿ ಭಾಗದಲ್ಲಿ ಲಸಿಕೆ ನೀಡಿರುವ‌ ಪ್ರಮಾಣದ ಬಗ್ಗೆ ಪರಿಶೀಲನೆ ಬಳಿಕ ನಿರ್ಧರಿಸುತ್ತೇವೆ ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ‌ನೈತಿಕ ಪೊಲೀಸ್ ಗಿರಿ: ಇಬ್ಬರು ಆರೋಪಿಗಳು ಅಂದರ್

ಎರಡು ವರ್ಷದ‌ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲು ಅಂತಿಮ ಕ್ಲಿಯರೆನ್ಸ್ ಬೇಕಾಗಿದೆ. ಅದು ಬಂದ ಮೇಲೆ ನಿಯಮಾವಳಿ ಪ್ರಕಾರ ನೀಡಲಾಗುವುದು. ಲಸಿಕೆ ನೀಡುವುದರಲ್ಲಿ ಕರ್ನಾಟಕ ಯಾವಾಗಲು ಮುಂದೆ ಇದ್ದು, ಇದರಲ್ಲಿಯೂ ಮಾಡುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.