ETV Bharat / city

ಫಲ್ಗುಣಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಬಾಲಕ ಸಾವು - belthangady news

ಫಲ್ಗುಣಿ ನದಿಯಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದಲ್ಲಿ ನಡೆದಿದೆ.

boy-died-by-drowned-into-the-river
ಫಲ್ಗುಣಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಬಾಲಕ ಸಾವು
author img

By

Published : Oct 21, 2021, 2:50 AM IST

Updated : Oct 21, 2021, 2:54 PM IST

ಬೆಳ್ತಂಗಡಿ, ದಕ್ಷಿಣ ಕನ್ನಡ: ನದಿಗೆ ಸ್ನಾನಕ್ಕೆಂದು ತೆರಳಿದ ಬಾಲಕನೊಬ್ಬ ಮುಳುಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಎಂಬಲ್ಲಿ ನಡೆದಿದೆ. ಕಾಶಿಪಟ್ನ ಗ್ರಾಮದ ಪಿಂಟೊ ನಗರದ ನಿವಾಸಿ ಮೇಲ್ವಿನ್ ಪಿಂಟೋ ಎಂಬವರ ಪುತ್ರ ಮಾರ್ಟಿನ್ ಪಿಂಟೊ(15)ಮೃತಪಟ್ಟ ಬಾಲಕನಾಗಿದ್ದಾನೆ.

ಅಕ್ಟೋಬರ್ 19ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಸಮೀಪವಿರುವ ಫಲ್ಗುಣಿ ನದಿಗೆ ಸ್ನಾನಕ್ಕೆಂದು ಹೋದವನು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅವನ ಮೃತದೇಹ ಮರುದಿನ (ಅಕ್ಟೋಬರ್​ 20) ಮೊರಂತಕಾಡು ಸೇತುವೆಯ ಬಳಿ ಪತ್ತೆಯಾಗಿದೆ.

ಘಟನೆಯ ವಿವರ: ಕಾಶಿಪಟ್ಣ ಗ್ರಾಮದ ಪಿಂಟೊ ನಗರ ನಿವಾಸಿ ಮೇಲ್ವಿನ್ ಪಿಂಟೋರವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇವರ ಪತ್ನಿ ಹೆಲನ್ ಪಿಂಟೋ ಹಾಗೂ ಮಕ್ಕಳಾದ ಮಾರ್ಟಿನ್ ಪಿಂಟೋ ಮತ್ತು ಮೆಲ್ ರಾಯ್ ಪಿಂಟೋರವರೊಂದಿಗೆ ವಾಸ್ತವ್ಯವಿದ್ದರು.

ಹೆಲನ್ ಪಿಂಟೋರವರು ಅಕ್ಟೋಬರ್​ 19ರಂದು ಮಧ್ಯಾಹ್ನ ಔಷಧಿ ತರಲೆಂದು ನೆರೆಮನೆಯ ಮೆಲ್ವಿನ್ ರೋಡ್ರಿಗಸ್ ಮತ್ತು ಸೆಲಿನ್ ರೋಡ್ರಿಗಸ್ ರೊಂದಿಗೆ ಮೂಡಬಿದ್ರೆಯ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಇಬ್ಬರೂ ಮಕ್ಕಳು ಮನೆಯಲ್ಲಿದ್ದರು.

ಸಂಜೆ ತಾಯಿ ಮನೆಗೆ ಮರಳಿದ ವೇಳೆ ಮಗ ಮಾರ್ಟಿನ್ ಮನೆಯಲ್ಲಿ ಕಾಣದೇ ಇದ್ದಾಗ ಮನೆ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಟ ನಡೆಸಿದ್ದ ವೇಳೆ ಮನೆಯ ಸಮೀಪದ ಮೊರಂತಕಾಡು ಸೇತುವೆ ಕೆಳಗಿರುವ ಮುರಿದ ಹಳೆಯ ಸೇತುವೆ ಬಳಿ ಬಾಲಕನ ಬಟ್ಟೆ, ಬೈರಸು ಮತ್ತು ಚಪ್ಪಲಿ ಇರುವುದು ಕಂಡುಬಂದಿತ್ತು. ಅಲ್ಲದೇ ಮನೆಯಲ್ಲಿ ಬಟ್ಟೆ ಒಣಗಲು ಹಾಕುವ ನೈಲಾನ್ ದಾರವನ್ನು ಹೊಳೆಯ ನೀರಿನಲ್ಲಿರುವ ಗಿಡಕ್ಕೆ ಕಟ್ಟಿದ್ದು ಅದರ ಇನ್ನೊಂದು ತುದಿ ಸೇತುವೆ ಮೇಲೆ ಇತ್ತೆನ್ನಲಾಗಿದೆ.

ಈ ಬಗ್ಗೆ ಬಾಲಕನ ತಾಯಿ ಕಾಣೆಯಾದ ತಮ್ಮ ಮಗನನ್ನು ಹುಡುಕಿ ಕೊಡುವಂತೆ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮ ಮಗ ಸ್ನಾನಕ್ಕೆಂದು ನದಿ ನೀರಿಗೆ ಇಳಿದು ಹೊಳೆಯಲ್ಲಿ ಮುಳುಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ವೇಣೂರು ಪೊಲೀಸರು ಬುಧವಾರ ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರಿಂದ ಮೊರಂತಕಾಡು ಸೇತುವೆಯ ಬಳಿ ಶೋಧ ಕಾರ್ಯ ನಡೆಸಿದ ವೇಳೆ ಬಾಲಕನ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ:ವೇಶ್ಯಾವಾಟಿಕೆ ಟೂರಿಸಂ ದಂಧೆ: ಇಬ್ಬರು ಆರೋಪಿಗಳು ಅಂದರ್​

Last Updated : Oct 21, 2021, 2:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.