ETV Bharat / city

ಮಂಗಳೂರಿನಲ್ಲಿಂದು 89 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನೆ - swab test in Mangalore

ಮಂಗಳೂರಿನಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಲೇ ಇದ್ದು ಇಂದು ಕೂಡಾ 89 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಇದಕ್ಕೂ ಮುನ್ನ ಕಳಿಸಿಕೊಡಲಾಗಿದ್ದ ವರದಿಯಲ್ಲಿ ಮೂರು ಪಾಸಿಟಿವ್ ಕೇಸ್​​​​​ಗಳು ಪತ್ತೆಯಾಗಿದ್ದವು.

Mangalore
ಮಂಗಳೂರು
author img

By

Published : May 9, 2020, 10:40 PM IST

ಮಂಗಳೂರು: ಜಿಲ್ಲೆಯಲ್ಲಿ ಇಂದು 89 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದ್ದು ಒಟ್ಟು 286 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ.

ಈ ಹಿಂದೆ ಪರೀಕ್ಷೆಗೆ ಕಳಿಸಿಕೊಡಲಾಗಿದ್ದ 42 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಯಲ್ಲಿ 39 ನೆಗೆಟಿವ್ ಹಾಗೂ 3 ಪಾಸಿಟಿವ್ ಬಂದಿದೆ. ಇದುವರೆಗೂ 3956 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದ್ದು ಇದರಲ್ಲಿ 31 ಪಾಸಿಟಿವ್ ಮತ್ತು 3925 ನೆಗೆಟಿವ್ ಬಂದಿದೆ. ಇಂದು 102 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು ಇದುವರೆಗೂ ಒಟ್ಟು 40, 526 ಮಂದಿಯನ್ನು ಸ್ಕ್ರೀನಿಂಗ್ ಮಾಡಿದಂತಾಗಿದೆ.

40 ಮಂದಿ ಇಎಸ್ಐ ಆಸ್ಪತ್ರೆಯಲ್ಲಿ ಎನ್​​​​​​ಐಟಿಕೆಯಲ್ಲಿ 32 ಮಂದಿ ಕ್ವಾರಂಟೈನ್​​​​​​​​​​​​​​​​​​​​​ನಲ್ಲಿ ಇದ್ದಾರೆ. ಇಂದಿಗೆ 6073 ಮಂದಿ 28 ದಿನದ ಹೋಮ್ ಕ್ವಾರಂಟೈನ್ ಪೂರೈಸಿದ್ದಾರೆ . ಕೊರೊನಾ ಪಾಸಿಟಿವ್ ಬಂದಿದ್ದ 13 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೂವರು ಸಾವನ್ನಪ್ಪಿದ್ದು 15 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ 15 ಮಂದಿಯಲ್ಲಿ 58 ವರ್ಷದ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.