ಮಂಗಳೂರು: ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾದ ಪಾಸ್ ಬಗ್ಗೆ ಗೊಂದಲಗಳಿರುವುದರಿಂದ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಮೂರು ಹೆಲ್ಪ್ ಡೆಸ್ಕ್ಗಳನ್ನ ರಚಿಸಲಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಸಂಚಾರಕ್ಕೆ ಸಂಬಂಧಿಸಿದಂತೆ ಪಾಸ್ನಲ್ಲಿ ಗೊಂದಲವಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಕಾಸರಗೋಡು ಕಡೆಯಿಂದ 2 ಸಾವಿರಕ್ಕೂ ಅಧಿಕ ಅರ್ಜಿಗಳು ಪಾಸ್ಗಾಗಿ ಬಂದಿದ್ದವು. ನಿನ್ನೆಯ ತನಕ 400 ಪಾಸ್ ವಿತರಣೆಯಾಗಿದೆ. ಉಳಿದ ಅರ್ಜಿಗಳಿಗೆ ಆಧಾರ್ ಕಾರ್ಡ್ ಸಹಿತ ಸಮರ್ಪಕ ದಾಖಲೆ ಇಲ್ಲವೆಂದು ದ.ಕ ಜಿಲ್ಲಾಡಳಿತ ಪಾಸ್ ವಿತರಣೆ ಸ್ಥಗಿತಗೊಳಿಸಿದೆ.
ಈ ಹಿನ್ನೆಲೆಯಲ್ಲಿ ತಲಪಾಡಿ ಗಡಿಯಲ್ಲಿ ಮೂರು ಹೆಲ್ಪ್ ಡೆಸ್ಕ್ಗಳನ್ನು ಸ್ಥಾಪಿಸಿ, ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಪ್ರಯಾಣಿಕರಿಗೆ ತಲಪಾಡಿ ಗಡಿಯಲ್ಲಿ ಪಾಸ್ ನೀಡಲಾಗುವುದು ಎಂದರು.