ಕಲಬುರಗಿ: ಭಾರತದಲ್ಲಿ ಹಿಂದೂಗಳ ಮೆಜಾರಿಟಿ ಇರುವವರೆಗೂ ಸಣ್ಣ ಸಮುದಾಯಗಳು ಸುರಕ್ಷಿತವಾಗಿರಬಹುದು. ಪಾರ್ಸಿ, ಯಹೂದಿಗಳು ಭಾರತದಲ್ಲಿ ನೆಮ್ಮದಿಯಾಗಿದ್ದಾರೆ. ಆದ್ರೆ ಈ ಪರಿಸ್ಥಿತಿ ಬೇರೆ ದೇಶಗಳಲ್ಲಿ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬೇರೆ ಜಾತಿ ಮೆಜಾರಿಟಿ ಬಂದ್ರೆ ಅವರ ಬಾಯಲ್ಲಿ ಬರೋದು ಶರಿಯತ್. ಹಿಂದೂಗಳು ಮೆಜಾರಿಟಿ ಕಳೆದುಕೊಂಡ್ರೆ ದೇಶದಲ್ಲಿ ಅಂಬೇಡ್ಕರ್ ಸಂವಿಧಾನ ಇರಲ್ಲ ಜಾತ್ಯಾತೀತತೆ ಇರಲ್ಲ ಎಂದರು.
ಕಾಂಗ್ರೆಸ್ ಸೋಲಿಸಲು ಸಿದ್ದರಾಮಯ್ಯ ಸಂದೇಶ ಕೊಡ್ತಾರೆ: ಸಿದ್ದರಾಮಯ್ಯ ವಿಶ್ರಾಂತಿಗಾಗಿ ಯಾವಾಗ ಹೋಗ್ತಾರೋ ಆವಾಗ ಕಾಂಗ್ರೆಸ್ ಗೆಲ್ಲಬಾರದು ಎನ್ನುವ ಸಂದೇಶ ಕೊಡ್ತಾರೆ. ಕೆಲವೊಮ್ಮೆ ನೇರವಾಗಿ ಹೇಳಿದ್ರೆ, ಕೆಲವೊಮ್ಮೆ ಹಿಂಬಾಲಕರ ಮೂಲಕ ಹೇಳಿಸ್ತಾರೆ. ಈ ಬಾರಿ ಡಿಕೆಶಿ ನೇತೃತ್ವದಲ್ಲಿ ಯಾವ ಚುನಾವಣೆಯೂ ಗೆಲ್ಲಬಾರದು ಎನ್ನುವ ಸಂದೇಶ ಕೊಟ್ಟಿದ್ದಾರೆ ಎಂದು ರವಿ ದೂರಿದರು.
ಕಲಬುರಗಿಯಲ್ಲಿ ಬದಲಾವಣೆ ಖಚಿತ: ಬಿಜೆಪಿ ಕಲಬುರಗಿ ಪಾಲಿಕೆ ಗದ್ದುಗೆ ಏರೋದು ಗ್ಯಾರಂಟಿ. ನಿಮ್ಮ ಭಾಗದ ಅಭಿವೃದ್ಧಿ ವೇಗ ಪಡೆಯೋದಕ್ಕೆ ಬಿಜೆಪಿಗೆ ಒಂದು ಅವಕಾಶ ಕೊಡಿ. ನಮ್ಮ ಪಕ್ಷ ಮೂರು ಮಹಾನಗರ ಪಾಲಿಕೆಯಲ್ಲೂ ಅಧಿಕಾರಕ್ಕೆ ಬರುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಹಿಂದುಳಿಯಲು ಕಾಂಗ್ರೆಸ್ ಕಾರಣ: ಕಲ್ಯಾಣ ಕರ್ನಾಟಕ ಭಾಗ ಅತ್ಯಂತ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಹೊಂದಿದೆ. ಅದಕ್ಕೆ ಕಾರಣ ಸ್ವಾತಂತ್ರ್ಯ ನಂತರ ಆಡಳಿತ ನಡೆಸಿದ ಕಾಂಗ್ರೆಸ್. ಬಿಜೆಪಿ ಅಧಿಕಾರಕ್ಕೆ ಬಂದಾಗ ಅಭಿವೃದ್ಧಿಗೆ ಒತ್ತು ಕೊಡುವಷ್ಟು ಕಾಂಗ್ರೆಸ್ ಕೊಟ್ಟಿಲ್ಲ. ಕಲ್ಯಾಣ ಕರ್ನಾಟಕ ಕಾಂಗ್ರೆಸ್ ಬೆಂಬಲಿಸಿರೋದು ಹೆಚ್ಚು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಿಂತ ನಿಮ್ಮ ಅಭಿವೃದ್ಧಿಯೇ ಹೆಚ್ಚಾಗಿತ್ತು. ನಿಮ್ಮ ಸ್ವಂತ ಹಿತದಿಂದ ಕಲ್ಯಾಣ ಕರ್ನಾಟಕ ಹಿಂದುಳಿದಿದೆ. ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಿದೆ. ವಿಮಾನ ನಿಲ್ದಾಣ, ಬೀದರ್ ಕಲಬುರಗಿ ರೈಲ್ವೆ ನಿಲ್ದಾಣ ನಮ್ಮ ಕಾಲದಲ್ಲಿ ಆಗಿದೆ. ಇವಾಗ ದಿನದ 24 ಗಂಟೆಯೂ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಅಫ್ಘಾನಿಸ್ಥಾನಕ್ಕಾದ ಗತಿ ಕಲ್ಯಾಟ ಕರ್ನಾಟಕ್ಕೆ ಆಗುತ್ತೆ: ಬಿಜೆಪಿಗೆ ಈ ಬಾರಿ ಪಾಲಿಕೆಯಲ್ಲಿ ಒಂದು ಬಾರಿ ಅಧಿಕಾರಕ್ಕೆ ಅವಕಾಶ ಮಾಡಿಕೊಡಿ. ನಮ್ಮ ಆದ್ಯತೆ ಅಭಿವೃದ್ಧಿ ಮತ್ತು ಹಿಂದುತ್ವಕ್ಕೆ ಬದ್ಧತೆ. ಹಿಂದೂಗಳು ಮೇಜಾರಿಟಿ ಇರೋವರೆಗೆ ಮಾತ್ರ ದೇಶದಲ್ಲಿ ಅಂಬೇಡ್ಕರ್ ಸಂವಿಧಾನ ಇರುತ್ತೆ. ಹಿಂದೂಗಳು ಮೈನಾರಿಟಿ ಆದಾಗ ಗಾಂಧಾರಕ್ಕಾದ (ಅಫ್ಘಾನಿಸ್ಥಾನ) ಗತಿ ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿಗೆ ಆಗುತ್ತೆ. ಸಮಭಾವ ಇರುವ ಜನ ಬಹು ಸಂಖ್ಯಾತ ಇರುವಾಗ ಮಹಿಳೆಯರ ರಕ್ಷಣೆ ಆಗುತ್ತೆ ಎಂದರು.
ಡಿಕೆಶಿ ಸಹೋದರರು ಬುದ್ಧನನ್ನು ಉಡಾಯಿಸದ್ರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತನ್ನ ಸಹೋದರರು ಅಂತಾ ಹೇಳುವವರು ಬುದ್ಧನನ್ನ ಊಡಾಯಿಸಿದ್ರು. ಹಾಗಾಗಿ ಕಲಬುರಗಿಗೂ ಆ ಸ್ಥಿತಿ ಬರಬಾರದು. ಒಲೈಕೆ ರಾಜಕಾರಣದಿಂದ ಮತ್ತಷ್ಟು ಪಾಕಿಸ್ತಾನ ಸೃಷ್ಟಿ ಆಗುತ್ತೆ. ಕಾಂಗ್ರೆಸ್ ದೇಶ ಮೊದಲು ಅನ್ನೋದನ್ನ ಮರೆತಿದೆ. ತಾಲಿಬಾನಿಗಳ ಜೊತೆಗೆ ಆರ್ಎಸ್ಎಸ್ ಹೋಲಿಕೆ ಮಾಡಿರೋದು ಓಲೈಕೆಯ ರಾಜಕಾರಣ ಎಂದು ದೂರಿದ್ದಾರೆ.