ETV Bharat / city

ಇಂದು ಮಲ್ಲಿಕಾರ್ಜುನ​ ಖರ್ಗೆ ಹುಟ್ಟುಹಬ್ಬ: ಕಲಬುರಗಿಯಲ್ಲಿ ಅಭಿಮಾನಿಗಳ ಸಂಭ್ರಮ - ರಾಜ್ಯಸಭಾ ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭಾ ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು 80 ನೇ ವಸಂತಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆ ಖರ್ಗೆ ಅವರ ಸುಮಾರು 200 ಅಡಿ ಎತ್ತರದ ಫ್ಲೆಕ್ಸ್​ಗೆ ಪುಷ್ಪಾರ್ಚನೆ ಮಾಡಿ, ಜನ್ಮ ದಿನ ಆಚರಣೆ ಮಾಡಿದರು.

Senior Congress leader Mallikarjun Kharge
ಮಲ್ಲಿಕಾರ್ಜುನ​ ಖರ್ಗೆ ಹುಟ್ಟುಹಬ್ಬ
author img

By

Published : Jul 21, 2021, 2:19 PM IST

ಕಲಬುರಗಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ರಾಜ್ಯಸಭಾ ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು 80 ನೇ ವಸಂತಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆ ಕಲಬುರಗಿಯಲ್ಲಿ ಅವರ ಅಭಿಮಾನಿಗಳು ಜನ್ಮ ದಿನ ಆಚರಿಸಿದರು.

ನಗರದ ಜಗತ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು, ಮಲ್ಲಿಕಾರ್ಜುನ ಖರ್ಗೆ ಅವರ ಸುಮಾರು 200 ಅಡಿ ಎತ್ತರದ ಫ್ಲೆಕ್ಸ್​ಗೆ ಪುಷ್ಪಾರ್ಚನೆ ಮಾಡಿದರು. ನಂತರ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಪರಸ್ಪರ ಸಿಹಿ ಹಂಚಿಕೊಂಡ ಅಭಿಮಾನಿಗಳು, ಡ್ಯಾನ್ಸ್​ ಮಾಡಿ ಸಂಭ್ರಮಿಸಿದರು. ಇದೇ ವೇಳೆ, ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ ಎಂದು ಘೋಷಣೆ ಕೂಗಿದರು.

ಮಲ್ಲಿಕಾರ್ಜುನ​ ಖರ್ಗೆ ಜನ್ಮ ದಿನ ಆಚರಣೆ

ದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಭೇಟಿಯಾಗಿ ಹುಟ್ಟುಹಬ್ಬಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ ಅವರ ನೇತೃತ್ವದಲ್ಲಿ ನೂರಾರು ಜನ ದೆಹಲಿಗೆ ತೆರಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.