ಕಲಬುರಗಿ : ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ವಿವಾದದ ಬಗ್ಗೆ ಮಾತನಾಡಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. 144 ಸೆಕ್ಷನ್ ಹಾಕಿ ಪೂಜೆಗೆ ಅವಕಾಶ ನೀಡದಿರುವುದು ಸರಿಯಲ್ಲ.
ಮೈಕ್ ಹಾಕಿ ನಮಾಜ್ ಮಾಡಲು ಅವರಿಗೆ ಅವಕಾಶ ಕೊಟ್ಟಂತೆ ನಮಗೂ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. ಪುರಾತತ್ವ ಇಲಾಖೆ ಸುಪರ್ದಿಯಲ್ಲಿದ್ದು, ಅನುಮತಿ ನಿಷೇಧವಿದ್ದರೂ ಒಳಗಡೆ ಅತಿಕ್ರಮ ಪ್ರವೇಶ ಮಾಡಲಾಗುತ್ತಿದೆ. ಪುರಾತತ್ವ ಇಲಾಖೆಯವರನ್ನು ಸಸ್ಪೆಂಡ್ ಮಾಡಿ ಎಂದು ಒತ್ತಾಯಿಸಿದರು.
ಈ ನಡುವೆ ಬಸವ ಕಲ್ಯಾಣದ ಬಗ್ಗೆಯೂ ಮಾತನಾಡಿದ ಅವರು, ಮೂಲ ಅನುಭವ ಮಂಟಪ ಪೀರ್ ಪಾಷಾ ಬಂಗ್ಲಾ ನಿಜಾಮ ಆಡಳಿತದಲ್ಲಿ ಅತಿಕ್ರಮಣ ಮಾಡಿದ್ದಾರೆ. ಆದ್ರೆ, ಅದು ಮೂಲ ಅನುಭವ ಮಂಟಪ ಅನ್ನೋದಕ್ಕೆ ಸಾಕಷ್ಟು ದಾಖಲೆಗಳಿವೆ. ಜೂನ್ 12ರಂದು ಈ ಬಗ್ಗೆ ಆಂದೋಲನ ಮಾಡಲಾಗುವುದು ಎಂದರು.
ಇದನ್ನೂ ಓದಿ: ಹರಿದ್ವಾರ ಅರ್ಧಕುಂಭದಲ್ಲಿ ಬಾಂಬ್ ಸ್ಫೋಟಿಸುವ ಪ್ಲಾನ್.. ಐವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ