ETV Bharat / city

ಪಿಎಸ್‌ಐ ಅಕ್ರಮದ ಕಿಂಗ್‌ಪಿನ್‌ಗಳಿಲ್ಲದೆ ನೆರವೇರಿದ ಸಾಮೂಹಿಕ ವಿವಾಹ - ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ

ಅಫಜಲಪುರದ ನ್ಯಾಷನಲ್ ಫಂಕ್ಷನ್ ಹಾಲ್​ನಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದದಡಿ ಬಂಧಿತರಾದ ಮಹಾಂತೇಶ ಹಾಗೂ ರುದ್ರಗೌಡ ಪಾಟೀಲ್ ಸಹೋದರರು ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು.

MASS WEDDING HELD IN KALABURAGI
ನಿರ್ವಿಘ್ನವಾಗಿ ನೆರವೇರಿದ ಸಾಮೂಹಿಕ ವಿವಾಹ
author img

By

Published : Apr 23, 2022, 4:22 PM IST

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಆರೋಪದಡಿ ಬಂಧಿತರಾದ ಮಹಾಂತೇಶ ಹಾಗೂ ರುದ್ರಗೌಡ ಪಾಟೀಲ್ ಸಹೋದರರು ಆಯೋಜಿಸಿದ್ದ ಸಾಮೂಹಿಕ ವಿವಾಹ ಇಂದು ನೆರವೇರಿತು. ಅಫಜಲಪುರದ ನ್ಯಾಷನಲ್ ಫಂಕ್ಷನ್ ಹಾಲ್​ನಲ್ಲಿ 101 ಜನರ ಸಾಮೂಹಿಕ ವಿವಾಹ ನಡೆಸಲು ಪಾಟೀಲ್ ಸಹೋದರರು ಸಿದ್ಧತೆ ಮಾಡಿಕೊಂಡಿದ್ದರು.

ಸಾಮೂಹಿಕ ವಿವಾಹದಲ್ಲಿ 57 ಜೋಡಿ ಮದುವೆಗೆ ನೋಂದಣಿ ಮಾಡಿಕೊಂಡಿದ್ದರು. ಕಾರ್ಯಕ್ರಮವನ್ನು ಆರೋಪಿಗಳ ಕುಟುಂಬದವರು ನೆರವೇರಿಸಿದ್ದಾರೆ. ಅಫಜಲಪುರ ಶಾಸಕ ಎಮ್‌.ವೈ.ಪಾಟೀಲ್ ಸೇರಿ ಅನೇಕ‌ರು ನವ ಜೋಡಿಗೆ ಶುಭ ಹಾರೈಸಿದರು.

ಮಹಾಂತೇಶ ಪಾಟೀಲ್ ಹಾಗೂ ಆರ್.ಡಿ.ಪಾಟೀಲ್ ಪಿಎಸ್ಐ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ಗಳು ಎನ್ನಲಾಗುತ್ತಿದೆ. ಇವರು ಪರೀಕ್ಷಾರ್ಥಿಗಳಿಗೆ ಬ್ಲೂಟೂತ್ ಡಿವೈಸಿ ಒದಗಿಸಿ ಅಕ್ರಮವಾಗಿ ಪರೀಕ್ಷೆ ಬರೆಸುತ್ತಿದ್ದರು. ನಿನ್ನೆ ಮಹಾಂತೇಶ ಪಾಟೀಲ್ ಹಾಗೂ ಇಂದು ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಆರ್.ಡಿ.ಪಾಟೀಲ್‌ನನ್ನು ಸಿಐಡಿ ಬಂಧಿಸಿದೆ. ಈ ಹಿಂದೆ ಅಫಜಲಪುರ ತಾಲೂಕಿನ ಗೌರ (ಬಿ) ಗ್ರಾಮ ಪಂಚಾಯತಿ ಅಧ್ಯಕ್ಷನಾಗಿದ್ದ ಆರ್.ಡಿ.ಪಾಟೀಲ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಜೈಲು ಮೆಟ್ಟಿಲು ತುಳಿಯದೆ ತಪ್ಪಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪಿಎಸ್‌ಐ ಅಕ್ರಮ : 'ಕೈ' ಮುಖಂಡನ ಸೋದರನ ಬಂಧನ.. ಮಹಾಂತೇಶ್​ಗೆ ಕರೆ ಮಾಡಿ ಬಲೆಗೆ ಬಿದ್ದ ಆರ್‌ ಡಿ ಪಾಟೀಲ್‌!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.