ETV Bharat / city

ನೋಡ ನೋಡುತ್ತಲೇ ಬೆಳೆ ಸ್ವಾಹ.. ಬಸವನ ಹುಳು ಕಾಟಕ್ಕೆ ಬೆಚ್ಚಿದ ಕಲಬುರಗಿ ರೈತರು - ಚಿಂಚೋಳಿ ತಾಲ್ಲೂಕಿನ ಅನ್ನದಾತರಿಗೆ ಬಸವನ ಹುಳು ಹಾವಳಿ

ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಉದ್ದು, ಹೆಸರು, ತೊಗರಿ, ಸೋಯಾ ಬಿತ್ತಿರುವ ಮಾಡಿರುವ ರೈತರಿಗೆ ಬಸವನ ಹುಳುಗಳು ಕಾಟ ಕೊಡುತ್ತಿವೆ.

kalaburagi
ಬಸವನ ಹುಳು ಕಾಟಕ್ಕೆ ಕಲಬುರಗಿ ರೈತರು ಕಂಗಾಲು
author img

By

Published : Jul 18, 2022, 3:56 PM IST

ಕಲಬುರಗಿ : ಜಿಲ್ಲೆಯ ಚಿಂಚೋಳಿ ತಾಲೂಕಿನ ಅನ್ನದಾತರು ಬಸವನ ಹುಳುವಿನ ಹಾವಳಿಯಿಂದ ಕಂಗಾಲಾಗಿದ್ದಾರೆ. ರೈತರ ಲಾಭದ ಬೆಳೆಗಳಾದ ಉದ್ದು, ಹೆಸರು, ತೊಗರಿ, ಸೋಯಾ ಹೀಗೆ ಮುಂಗಾರು ಬೆಳೆಗಳಿಗೆ ಬಸವನ ಹುಳು ವಕ್ಕರಿಸಿದೆ. ಚಿಂಚೋಳಿಯ ಬಹುತೇಕ ಎಲ್ಲಾ ರೈತರ ಜಮೀನಿನುಗಳಲ್ಲಿ ಲಗ್ಗೆ ಇಟ್ಟಿರುವ ಬಸವನ ಹುಳುಗಳು ಕ್ಷಣಾರ್ಧದಲ್ಲಿ ಬೆಳೆಯನ್ನು ತಿಂದು ತೇಗುತ್ತಿವೆ.

ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿರುವ ರೈತರು ಬಸವನ ಹುಳು ಕಾಟದಿಂದ ಕಂಗಾಲಗಿದ್ದಾರೆ. ಪ್ರತಿ ಬೆಳೆ ಧಂಟಿಗೆ ವಕ್ಕರಿಸಿಕೊಂಡಿರುವ ಬಸವನ ಹುಳುಗಳ ಹಿಂಡು ಬೆಳೆ ಹಾಳು ಮಾಡುತ್ತಿವೆ. ರೈತರು ಎಷ್ಟೇ ಪ್ರಯತ್ನ ಪಟ್ಟರು ನಿಯಂತ್ರಣಕ್ಕೆ ಬರುತ್ತಿಲ್ಲ. ಬಸವನ ಹುಳುಗಳ ಹಾವಳಿಯಿಂದ ಬೇಸತ್ತು ಕಳೆ ತೆಗೆದಂತೆ ಹುಳುಗಳನ್ನ ಹುಡುಕಿ ಹುಡುಕಿ ತೆಗೆಯುತ್ತಿದ್ದಾರೆ.

ಬಸವನ ಹುಳು ಕಾಟಕ್ಕೆ ಕಲಬುರಗಿ ರೈತರು ಕಂಗಾಲು

ರಾಶಿಗಟ್ಟಲೆ ಹುಳುಗಳನ್ನ ತೆಗೆದರೂ ಮತ್ತೆ ಮತ್ತೆ ಬಸವನ ಹುಳು ಬೆಳೆಗಳಿಗೆ ಲಗ್ಗೆ ಇಟ್ಟು ಸಂಪೂರ್ಣ ಬೆಳೆ ನಾಶ ಮಾಡುತ್ತಿವೆ. ಪರಿಹಾರ ನೀಡುವಂತೆ ಅನ್ನದಾತರು ಮನವಿ ಮಾಡುತ್ತಿದ್ದಾರೆ. ಇತ್ತ ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಚಿಂಚೋಳಿ ತಾಲೂಕಿನಲ್ಲಿ ಅತೀ ಹೆಚ್ಚು ಬಸವನ ಹುಳು ಕಾಟ ಇದೆ. ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಅಲ್ಲಲ್ಲಿ ರೈತರ ಜಮೀನಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಒಟ್ಟಿನಲ್ಲಿ ಒಂದೆಡೆ ನಿರಂತರ ಜಿಟಿ ಜಿಟಿ ಮಳೆಗೆ ರೈತರ ಬೆಳೆ ಹಾನಿಯಾದರೆ, ಮತ್ತೊಂದೆಡೆ ಬಸವನ ಹುಳು ಲಗ್ಗೆ ಇಟ್ಟು ಅನ್ನದಾತನಿಗೆ ತೊಂದೆರೆಯಾಗಿದೆ. ಸೂಕ್ತ ಪರಿಹಾರಕ್ಕಾಗಿ ರೈತರು ಸರ್ಕಾರದತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ : ತೆಂಗು ಬೆಳೆ ಮೌಲ್ಯವರ್ಧನೆಗೆ ವಿಶೇಷ ಪ್ರಯತ್ನ.. ದ.ಕ ಜಿಲ್ಲೆಯಲ್ಲಿ ತಯಾರಾಗುತ್ತಿದೆ 'ಬನ್ನಂಗಾಯಿ' ಪಿಕಲ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.