ETV Bharat / city

ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ ಈ ಕಾಯ್ದೆ ಜಾರಿ ಆಗ್ತಿದೆ - ತಾರಾ - ಹುಬ್ಬಳ್ಳಿಯಲ್ಲಿ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ

ಮತಾಂತರ ಮಾಡುವಂತಹ ಕೆಲಸಕ್ಕೆ ಬಲವಂತವಾಗಿ ಯಾರಾದ್ರೂ ಕೈ ಹಾಕಿದ್ರೆ ಅದು ಶಿಕ್ಷೆಗೆ ಅರ್ಹ ಅನ್ನೋದು ನಮ್ಮ ಆಸೆ. ಎಲ್ಲರಿಗೂ ವೈಯಕ್ತಿಕವಾದ ನಿರ್ಧಾರ ಇರುತ್ತೆ. ಆದ್ರೆ ಯಾರದೋ ಬಲವಂತಕ್ಕೆ ಒಳಗಾಗಬಾರದು ಅನ್ನೋದು ಸರ್ಕಾರದ ಕಾಳಜಿ ಎಂದು ವಿಧಾನ ಪರಿಷತ್ ಸದಸ್ಯೆ ತಾರಾ ಹೇಳಿದರು.

Tara
ತಾರಾ
author img

By

Published : Dec 13, 2021, 1:20 PM IST

Updated : Dec 13, 2021, 2:40 PM IST

ಹುಬ್ಬಳ್ಳಿ: ಯಾರಿಗೆ ಆಗಲಿ ಬಲವಂತವಾಗಿ ಮತಾಂತರ ಮಾಡಿದ್ರೆ ಅದಕ್ಕೆ ಕಾನೂನು ಮತ್ತು ವೈಯಕ್ತಿಕವಾಗಿ ವಿರೋಧ ಇದೆ. ನಾವು ಹುಟ್ಟಿನಿಂದ ಬಂದ ಧರ್ಮವೇ ನಮ್ಮ ಧರ್ಮ ಆಗಿರುತ್ತದೆ. ಆದ್ರೆ ಯಾರದೋ ಬಲವಂತಕ್ಕಾಗಲಿ ಅಥವಾ ಎಮೋಷನಲ್ ಬ್ಲಾಕ್​​ ಮೇಲ್​ನಿಂದಾಗಿ, ಬೇರೆ ಬೇರೆ ಅನುಕೂಲ ಮಾಡೋದಾಗಿ ಆಸೆ ಆಮಿಷವೊಡ್ಡಿ ಮತಾಂತರ ಮಾಡೋದು ಕಾನೂನು ವಿರುದ್ಧ ಎಂದು ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ ಹೇಳಿದರು.

ಹುಬ್ಬಳ್ಳಿಯಲ್ಲಿ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಮಾತನಾಡಿದ ಅವರು, ಮತಾಂತರ ಮಾಡುವಂತಹ ಕೆಲಸಕ್ಕೆ ಬಲವಂತವಾಗಿ ಯಾರಾದ್ರೂ ಕೈ ಹಾಕಿದ್ರೆ ಅದು ಶಿಕ್ಷೆಗೆ ಅರ್ಹ. ಎಲ್ಲರಿಗೂ ವೈಯಕ್ತಿಕವಾದ ನಿರ್ಧಾರ ಇರುತ್ತೆ. ಆದ್ರೆ ಯಾರದೋ ಬಲವಂತಕ್ಕೆ ಒಳಗಾಗಬಾರದು ಅನ್ನೋದು ಸರ್ಕಾರದ ಕಾಳಜಿ ಎಂದರು.

ಇದನ್ನೂ ಓದಿ: ಮತಾಂತರ ನಿಷೇಧ ಬಿಲ್ ಮಂಡನೆಗೆ ಸಿದ್ಧತೆ; ಲವ್ ಜಿಹಾದ್ ನಿಷೇಧ ಕಾಯ್ದೆ ಪ್ರಸ್ತಾಪ ಇಲ್ಲ ಎಂದ ಗೃಹ ಸಚಿವರು

ಮತಾಂತರ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದು ಅವರ ವೈಯಕ್ತಿಕ ವಿಚಾರ. ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ ಈ ಕಾಯ್ದೆ ಜಾರಿ ಆಗುತ್ತಿದೆ. ಯಾವುದೇ ಕುಟುಂಬ ಅಥವಾ ವೈಯಕ್ತಿಕವಾಗಿ ಸರ್ಕಾರ ಕೈಹಾಕಿಲ್ಲ. ಎನ್​​​ಆರ್​​ಐಗಳ ಕೈವಾಡ ಇದರಲ್ಲಿ ಇದೆ, ಜೊತೆಗೆ ಬೇರೆ ಬೇರೆ ದೇಶಗಳ ಹಣ ಸಹಾಯ ಆಗ್ತಿದೆ ಅನ್ನೋ ಮಾಹಿತಿ ಇದೆ. ಮತಾಂತರ ಆದವರು ಯಾರೇ ಆಗಲಿ ಅವರು ಮತ್ತೆ ಅವರ ಮೂಲ ಧರ್ಮಕ್ಕೆ ಹೋಗೋಕೆ ಸ್ವಾತಂತ್ರ್ಯ ಇದೆ ಎಂದು ತಾರಾ ಹೇಳಿದರು.

Last Updated : Dec 13, 2021, 2:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.