ಹುಬ್ಬಳ್ಳಿ: ಕಾಂಗ್ರೆಸ್ನವರನ್ನು ಕಾಂಗ್ರೆಸ್ಸಿಗರೇ ಸೋಲಿಸಿದ್ದಾರೆ. ಇದರಲ್ಲಿ ಜೆಡಿಎಸ್ ಪಾತ್ರ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಈ ಬಾರಿ ಮೈತ್ರಿ ಗಟ್ಟಿಯಾಗಿರಲಿದೆ. ಮೈತ್ರಿ ಮುರಿದರೆ ಏನಾಗುತ್ತದೆ ಎಂದು ಬಿಜೆಪಿಯವರಿಗೂ ಗೊತ್ತಾಗಿದೆ. ಈ ಬಾರಿ ಅದನ್ನು ಮುರಿಯಲಿಕ್ಕಿಲ್ಲ. ಅಲ್ಲದೆ ಇದು ಮೈತ್ರಿ ಮಾತ್ರವಷ್ಟೇ. ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಲ್ಲ ಎಂದರು.
ಮಾಜಿ ಪ್ರಧಾನಿ ದೇವೇಗೌಡರ ಕುರಿತು ಪ್ರತಿಕ್ರಿಯಿಸಿ, ನಿಮ್ಮಷ್ಟಕ್ಕೆ ನೀವಿರಿ ಎಂದು ದೇವೇಗೌಡರಿಗೆ ಹೇಳಿದ್ದೇವೆ. ಅವರ ಆಲೋಚನೆಗಳು ಈಗ ನಡೆಯಲ್ಲ. ಅವರು ಹೇಳುವುದನ್ನು ಹೇಳುತ್ತಾರೆ, ಕೇಳುವುದು ಬಿಡುವುದು ನಮಗೆ ಬಿಟ್ಟದ್ದು. ಅದೇ ರೀತಿ ಅವರು ಹೇಳುವುದನ್ನು ಹೇಳಿದ್ದಾರೆ. ನಾವು ಮಾಡುವುದನ್ನು ಮಾಡುತ್ತೇವೆ ಎಂದರು.