ಧಾರವಾಡ: ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸುಮಾರು ಒಂದು ಲಕ್ಷ ಮೌಲ್ಯದ ಬಾಳಿಗಿಡಗಳನ್ನು ಕಡಿದು ಹೊತ್ತೊಯ್ದ ಘಟನೆ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ನಡೆದಿದೆ.
ರಾಯಪ್ಪ ಮಲ್ಲಪ್ಪ ಸುಳ್ಳದ ಎಂಬುವರ ತೋಟದಲ್ಲಿ ಬೆಳೆದಿದ್ದ ಸುಮಾರು 210 ಬಾಳಿಗಿಡ ಮತ್ತು ಬಾಳೆಗೊನೆಗಳನ್ನು ಬೆಳಗ್ಗೆ 10:30ರ ಸುಮಾರಿಗೆ ನಕಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಕಡಿದು ವಾಹನದಲ್ಲಿ ಕದ್ದೊಯ್ದಿದ್ದಾರೆ ಎಂದು ರೈತ ಆರೋಪಿಸಿದ್ದಾನೆ.
ಪ್ರಕರಣ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲು ರೈತ ರಾಯಪ್ಪ ಮುಂದಾಗಿದ್ದಾನೆ. ಕದ್ದವರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾನೆ.