ಧಾರವಾಡ: ಕೇಂದ್ರ ನಗರಾಭಿವೃದ್ಧಿ ಮತ್ತು ವಸತಿ ಸಚಿವಾಲಯ ಆರಂಭಿಸಿರುವ ಸ್ವಚ್ಛ ಸರ್ವೇಕ್ಷಣ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ಸಹಿ ಅಭಿಯಾನ ಮತ್ತು ಸೆಲ್ಫಿ ಪಾಯಿಂಟ್‍ಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಚಾಲನೆ ನೀಡಿದರು.
ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬರ ಸಹಕಾರ, ಸಲಹೆ ಅಗತ್ಯ. ಸಾರ್ವಜನಿಕರೂ ಈ ಅಭಿಯಾನದಲ್ಲಿ ಭಾಗವಹಿಸಬೇಕು. ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ, ದೂರುಗಳನ್ನು ಸ್ವಚ್ಛತಾ ಆ್ಯಪ್ ಅನ್ನೂ ಡೌನ್‍ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದು ಎಂದು ಅವರು ಮಾಹಿತಿ ನೀಡಿದರು.
ಜಿಪಂ ಸಿಇಓ ಡಾ.ಬಿ.ಸಿ.ಸತೀಶ್ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಮಾತನಾಡಿದರು. ನಾಗರಿಕರು ಉತ್ತಮ ಅಭಿಪ್ರಾಯ ದಾಖಲಿಸಿದರೆ ಮಹಾನಗರಕ್ಕೆ ಸ್ವಚ್ಛ ಸರ್ವೇಕ್ಷಣದಲ್ಲಿ ಉತ್ತಮ ಶ್ರೇಯಾಂಕ ಬರಲಿದೆ ಎಂದು ತಿಳಿಸಿದರು.