ETV Bharat / city

ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಹತ್ಯೆ.. ತಾನೇ ಕೊಲೆ ಮಾಡಿದ್ದೇನೆಂದು ಠಾಣೆಗೆ ಶರಣಾದ ಆರೋಪಿ - ರೌಡಿ ಶೀಟರ್ ಕೊಲೆ ಆರೋಪಿ ಠಾಣೆಗೆ ಹಾಜರ್

ಹುಬ್ಬಳ್ಳಿಯಲ್ಲಿ ರೌಡಿಶೀಟರ್​ನನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಹತ್ಯೆ
ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಹತ್ಯೆ
author img

By

Published : Mar 11, 2022, 10:14 AM IST

Updated : Mar 11, 2022, 9:00 PM IST

ಹುಬ್ಬಳ್ಳಿ: ಮನೆಗೆ ಹೋಗುತ್ತಿದ್ದ ರೌಡಿಶೀಟರೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಅರವಿಂದನಗರದ ಪಿಎನ್​​ಟಿ ಕ್ವಾಟರ್ಸ್ ಹಿಂದಿನ ರಸ್ತೆಯಲ್ಲಿ ನಡೆದಿದೆ.

ತೊರವಿಹಕ್ಕಲದ ನಿವಾಸಿಯಾಗಿದ್ದ ಅಕ್ಬರ ಅಲ್ಲಾಭಕ್ಷ್ಯ ಮುಲ್ಲಾ ಹತ್ಯೆಯಾದ ರೌಡಿಶೀಟರ್. ಹುಬ್ಬಳ್ಳಿಯ ಹೊಸೂರಿನಲ್ಲಿದ್ದ ಅಕ್ಬರ್ ಹಲವು ವರ್ಷಗಳ ಹಿಂದೆ ಅರವಿಂದನಗರದ ಬಳಿ ಮನೆ ಮಾಡಿಕೊಂಡಿದ್ದ, ಮುಖ ಗುರುತು ಸಿಗದಂತೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಶಿರಡಿನಗರದ ರಮೇಶ ನೀರಗಟ್ಟಿ ಹಾಗೂ ಇಂದಿರಾನಗರದ ನವೀನ್ ಎಂಬುವವರೊಂದಿಗೆ ಕುಡಿದು ನಂತರ ಮನೆಗೆ ಬರುವಾಗ ಆತನನ್ನು ಕೊಲೆ ಮಾಡಿದ್ದೇನೆ ಎಂದು ಸದಾನಂದ ಬುರ್ಲಿ ಎಂಬಾತ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಹತ್ಯೆ

ಪ್ರಕರಣ ರಾತ್ರಿ 11.30 ರಿಂದ 12 ಗಂಟೆಯೊಳಗೆ ನಡೆದಿದ್ದು, ಘಟನೆಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಹಳೇಹುಬ್ಬಳ್ಳಿ ಠಾಣೆಗೆ ಸದಾನಂದ ಬುರ್ಲಿ ತಾನೇ ಕೊಲೆ ಮಾಡಿರುವುದಾಗಿ ಶರಣಾಗಿದ್ದಾನೆ. ಆದರೆ ಕೊಲೆ ಹಿಂದೆ ಹಲವರು ಶಾಮೀಲಾಗಿರುವ ಶಂಕೆ ಇದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಪಂಚ ರಾಜ್ಯ ಚುನಾವಣೆ: ಅಚ್ಚರಿಯಾದ್ರೂ ಇದು ಸತ್ಯ.. ನೋಟಾಗೆ ಗುದ್ದಿದ ಸುಮಾರು ಎಂಟು ಲಕ್ಷ ಮಂದಿ!

Last Updated : Mar 11, 2022, 9:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.