ಹುಬ್ಬಳ್ಳಿ: ನಗರದಲ್ಲಿ ಕೊರೊನಾ ಸೋಂಕು ಧೃಢಪಟ್ಟ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಐವರು ಪೊಲೀಸರ ವರದಿ ನೆಗೆಟಿವ್ ಬಂದಿದೆ. ಇದರಿಂದ ಪೊಲೀಸ್ ಇಲಾಖೆ ನಿಟ್ಟುಸಿರು ಬಿಟ್ಟಿದೆ.
![report of police is cororna negetive](https://etvbharatimages.akamaized.net/etvbharat/prod-images/kn-hbl-07-police-negative-av-7208089_13042020191550_1304f_1586785550_550.png)
ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ ಎಂದು ಐವರು ಪೊಲೀಸರನ್ನು ಜಿಲ್ಲಾಡಳಿತ ಹೋಂ ಕ್ವಾರೆಂಟೈನ್ಗೆ ಕಳುಹಿಸಿತ್ತು. ಈಗ ಪೊಲೀಸರ ವರದಿ ನೆಗೆಟಿವ್ ಬಂದ ಪರಿಣಾಮ ಎಸಿಪಿ ಸಂತೋಷ ವ್ಯಕ್ತಪಡಿಸಿದ್ದು, ಪೊಲೀಸ್ ಸಿಬ್ಬಂದಿ ಭಯ ಪಡಬೇಡಿ ಎಂದು ಎಸಿಪಿ ಗೋವಿಂದರಾಜು ಪೊಲೀಸರಿಗೆ ಧೈರ್ಯ ಹೇಳಿದರು.
ಕೊರೊನಾ ಕುರಿತಾಗಿ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಎಸಿಪಿ ಪೊಲೀಸರಿಗೆ ಸೂಚನೆ ನೀಡಿದರು.