ETV Bharat / city

ತುರ್ತು ಸಂದರ್ಭದಲ್ಲಿ ಸಾರ್ವಜನಿಕೆರಿಗೆ ನೆರವಾಗಲು ಹುಬ್ಬಳ್ಳಿ ಪೊಲೀಸರಿಂದ ಹೊಸ ಪ್ಲಾನ್! - police

ಸಾರ್ವಜನಿಕರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸರು ಹೊಸ ಪ್ಲಾನ್ ಮಾಡಿದ್ದಾರೆ. ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ಹಾಗೂ ಇತರ ಮಾಹಿತಿಗಳನ್ನೊಳಗೊಂಡ ಸ್ಟಿಕರ್ ತಯಾರಿಸಿ ಅದನ್ನು ನಗರದೆಲ್ಲೆಡೆ ಅಂಟಿಸಿದ್ದಾರೆ.

sticker
author img

By

Published : Jul 13, 2019, 4:31 PM IST

ಹುಬ್ಬಳ್ಳಿ: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು, ಕಳ್ಳತನ ಹೀಗೆ ಮುಂತಾದ ಚಟುವಟಿಕೆಗಳು ಅಧಿಕವಾಗುತ್ತಿವೆ. ಆದರೆ, ಇಂತಹ ಚಟುವಟಿಕೆ ನಡೆಯುವ ಸಂದರ್ಭದಲ್ಲಿ ಅಲ್ಲಿರುವ ಸಾರ್ವಜನಿಕರು ಯಾರನ್ನು ಸಂಪರ್ಕಿಸಬೇಕು, ಏನು ಮಾಡಬೇಕು ಎಂಬ ಗೊಂದಲದಲ್ಲಿ ಇರುತ್ತಾರೆ.

ಈ ರೀತಿಯ ಗೊಂದಲವಾಗದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎಂ ಎನ್ ನಾಗರಾಜ ಅವರು ಹೊಸ ಪ್ಲಾನ್ ಮಾಡಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಕಳ್ಳತನ ,ದರೋಡೆ,ಹಾಗೂ ಇನ್ನಿತರ ಸಂದರ್ಭದಲ್ಲಿ ನೇರವಾಗಿ‌ ಪೊಲೀಸರನ್ನು ಸಂಪರ್ಕಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಠಾಣಾ ಸರಹದ್ದಿನಲ್ಲಿ ಇರುವ ಮನೆಗಳಿಗೆ ಸ್ಟಿಕರ್ ಅಂಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

sticker
ಸ್ಟಿಕರ್ ಅಂಟಿಸುತ್ತಿರುವ ಪೊಲೀಸರು

ಸ್ಟಿಕರ್ ವಿಶೇಷತೆ
ಈ ಸ್ಟಿಕರ್ ಸಾರ್ವಜನಿಕರ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆ ಹೆಸರು,ಬೀಟ್ ನಂಬರ್, ಬೀಟ್ ನಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಹೆಸರು, ಸಿಬ್ಬಂದಿ ಫೋನ್ ನಂಬರ್, ಪೊಲೀಸ್ ಠಾಣೆಯ ನಂಬರ್, ಈ ಬೀಟ್​ಗೆ ಬರುವ ಎಎಸ್ಐ ಹೆಸರು ಹಾಗೂ ಠಾಣಾ ಅಧಿಕಾರಿ ದೂರವಾಣಿ ಸಂಖ್ಯೆಯನ್ನು ಒಳಗೊಂಡಿದೆ.

ಸ್ಟಿಕರ್​ನಲ್ಲಿ ಸಮಗ್ರವಾದ ಮಾಹಿತಿ ಇದ್ದು ಇದನ್ನು ಹುಬ್ಬಳ್ಳಿ ಧಾರವಾಡ ನಗರದಲ್ಲಿ ಇರುವ ಪ್ರತಿ ಮನೆಗಳು ಹಾಗೂ ಅಂಗಡಿಗಳಲ್ಲಿ ಅಂಟಿಸಲಾಗುತ್ತಿದೆ. ಈ ರೀತಿ ಮಾಡುವುದರಿಂದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿಯನ್ನು ಕೊಡಲು ನೆರವಾಗುವ ಉದ್ದೇಶದಿಂದ ಈ ಪ್ಲಾನ್ ಮಾಡಿದ್ದಾರೆ.

ಸಾರ್ವಜನಿಕರಿಗೆ ಉಪಯೋಗವಾಗುವುದರ ಜೊತೆಗೆ ಇದು ಎಲ್ಲರ ಪ್ರಶಂಸೆಗೂ ಪಾತ್ರವಾಗಿದೆ.

Intro:ಹುಬ್ಬಳ್ಳಿ-02

ಸಾರ್ವಜನಿಕರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸರಿಂದ ಹೊಸ ಪ್ಲಾನ್ ಮಾಡಿದೆ. ಹೌದು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರದಲ್ಲಿ ಸಾಮಾನ್ಯವಾಗಿ ಕಾನೂನು ಬಾಹಿರ ಚಟುವಟಿಕೆಗಳು,ಹಾಗೂ ಕಳ್ಳತನ ಹೀಗೆ ಮುಂತಾದ ಚಟುವಟಿಕೆಗಳು ನಡೆಯುತ್ತವೆ ಆದ್ರೆ ಇಂತಹ ಚಟುವಟಿಕೆ ನಡೆಯುವ ಸಂದರ್ಭದಲ್ಲಿ ಅಲ್ಲಿರುವ ಸಾರ್ವಜನಿಕರಿಗೆ ಯಾರಿಗೆ ಹೇಳಬೇಕು ಏನು ಮಾಡಬೇಕು ಎಂಬ ಗೊಂದಲದಲ್ಲಿ ಸಾರ್ವಜನಿಕರು ಇರುತ್ತಾರೆ.
ಆದ್ರೆ ಈ ರೀತುಯ ಗೊಂದಲವಾಗದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎಂ ಎನ್ ನಾಗರಾಜ ಅವರು ಹೊಸ ಪ್ಲಾನ್ ಮಾಡಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಕಳ್ಳತನ ,ದರೋಡೆ,ಹಾಗೂ ಇನ್ನಿತರ ಸಂದರ್ಭದಲ್ಲಿ ನೇರವಾಗಿ‌ ಪೊಲೀಸರನ್ನು ಸಂಪರ್ಕಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಠಾಣೆಯ ಸರಹದ್ದಿನಲ್ಲಿ ಇರುವ ಮನೆಗಳಿಗೆ ಸ್ಟಿಕರ್ ಅಂಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಸ್ಟೀಕರ್ ವಿಶೇಷತೆ...
ಅಷ್ಟಕ್ಕೂ ಆ ಸ್ಟಿಕರ್ ಏನು ಎತ್ತ ಎಂದು ನೋಡುದಾದರೆ, ಸಾರ್ವಜನಿಕರ ವ್ಯಾಪ್ತಿಯಲ್ಲಿ ಬರೋ ಪೊಲೀಸ ಠಾಣೆ ಹೆಸರು,ಬೀಟ್ ನಂಬರ್,ಬೀಟ್ ನಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಹೆಸರು,ಸಿಬ್ಬಂದಿ ಫೋನ್ ನಂಬರ್,ಪೊಲೀಸ್ ಠಾಣೆಯ ನಂಬರ್,ಈ ಬಿಟ‌್ ಗೆ ಬರೋ ಎಎಸ್ ಐ ಹೆಸರು ಹಾಗೂ ಠಾಣಾ ಅಧಿಕಾರಿ ದೂರವಾಣಿ ಸಂಖ್ಯೆ ಇರಲಿದೆ.

ಈ ರೀತಿಯಾಗಿ ಇದರಲ್ಲಿ ಸಮಗ್ರವಾದ ಮಾಹಿತಿ ಇದ್ದು ಇದನ್ನು ಹುಬ್ಬಳ್ಳಿ ಧಾರವಾಡದಲ್ಲಿ ನಗರದಲ್ಲಿ ಇರುವ ಪ್ರತಿ ಮನೆಗಳು ಹಾಗೂ ಅಂಗಡಿಗಳಲ್ಲಿ ಅಂಟಿಸಲಾಗುತ್ತಿದೆ. ಈ ರೀತಿ ಮಾಡುವುದರಿಂದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿಯನ್ನು ಕೊಡಲು ನೆರವು ಆಗುವ ಉದ್ದೇಶದಿಂದ ಈ ಒಂದು ಪ್ಲಾನ್ ನನ್ನು ಮಾಡಿದ್ದಾರೆ..

ಈ ಮೂಲಕ ಇಲಾಖೆ ಸ್ಟಿಕರ್ ಅಂಟಿಸಿ ಜನರಿಗೆ ಇದರ ಉಪಯೋಗದ ಜೊತೆ ಸಾರ್ವಜನಿಕ ರೊಂದಿಗೆ ಉತ್ತಮ ಒಡನಾಟ ಹೊಂದಲು ಹಾಗೂ ಜನಸ್ನೇಹಿಯಾಗುತ್ತಿರುವದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.