ಹುಬ್ಬಳ್ಳಿ : ಫ್ಯಾಷನ್ ಶೋಗಳ ಮೇಲೂ ಕೊರೊನಾ ತನ್ನ ಕೆಟ್ಟ ಪರಿಣಾಮ ಬೀರಿದೆ.
ಕಳೆದ ವರ್ಷ ಬರೋಬ್ಬರಿ ಮೂರು ತಿಂಗಳ ಕಾಲ ಸಂಪೂರ್ಣ ದೇಶವನ್ನೇ ಲಾಕ್ಡೌನ್ ಮಾಡಲಾಗಿತ್ತು. ಇದರಿಂದಾಗಿ ಎಲ್ಲಾ ಕ್ಷೇತ್ರಗಳ ಸ್ಥಿತಿ ಅಯೋಮಯವಾಗಿತ್ತು. ಮಾಡೆಲ್ ಕ್ಷೇತ್ರ ನಂಬಿ ಜೀವನ ನಡೆಸುತ್ತಿದ್ದವರೂ ಸಂಕಷ್ಟಕ್ಕೀಡಾಗಿದ್ದರು.
ಕೊರೊನಾ ಕೇಸ್‌ಗಳು ಇಳಿಕೆ ಕಾಣ್ತಿವೆ ಅಂದಾಗ ಸರ್ಕಾರ ಫ್ಯಾಷನ್ ಶೋಗಳಿಗೆ ಅನುಮತಿ ನೀಡಿತ್ತು. ಮಾರ್ಗಸೂಚಿಗಳನ್ನ ಅನುಸರಿಸಿ ಇವೆಂಟ್ ನಡೆಸಿದ್ದ ಆಯೋಜಕರು ಹಾಗೂ ಸ್ಪರ್ಧೆಗಳಲ್ಲಿದ್ದ ಲಲನೆಯರಲ್ಲಿ ಮಂದಹಾಸ ಮೂಡಿತ್ತು.
ಈಗ ಮತ್ತೆ ಕೊರೊನಾ ಹಾವಳಿಯಿಂದ ಕೆಲ ರಾಜ್ಯಗಳಲ್ಲಿ ಲಾಕ್ಡೌನ್ ಆಗುವ ಸಾಧ್ಯತೆ ಹೆಚ್ಚಿದೆ. ಕರ್ನಾಟಕದಲ್ಲಿ ಜನತಾ ಕರ್ಫ್ಯೂ ಹಾಕಲಾಗಿದೆ. ಅದೀಗ ಫ್ಯಾಷನ್ ಲೋಕದಲ್ಲಿ ಮಿಂಚುಬೇಕು ಎಂದುಕೊಂಡಿದ್ದ ಯುವ ಪ್ರತಿಭೆಗಳು ಕನಸಿಗೆ ಎಲ್ಲಿ ಕಲ್ಲು ಬೀಳುತ್ತೋ ಅನ್ನೋ ಆತಂಕವಿದೆ.
ಇದನ್ನೂ ಓದಿ: Watch: ಸೈಕಲ್ ಏರಿ 'ಆಚಾರ್ಯ' ಸಿನಿಮಾ ಶೂಟಿಂಗ್ಗೆ ತೆರಳಿದ ಸೂನು ಸೂದ್!- ವಿಡಿಯೋ
ಹುಬ್ಬಳ್ಳಿ-ಧಾರವಾಡದಲ್ಲಿ ಮಿಸ್ ಅಂಡ್ ಮಿಸೆಸ್ ಹುಬ್ಬಳ್ಳಿ ಸೇರಿ ಚಿಕ್ಕಮಕ್ಕಳ ಫ್ಯಾಷನ್ ಶೋ ನಡೆಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಇಲ್ಲಿ ಹಲವಾರು ರಾಜ್ಯದ ಮಾಡೆಲ್ಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ವಿಭಿನ್ನ ಕ್ಯಾಟ್‌ವಾಕ್, ಸೌಂದರ್ಯ, ಉಡುಪುಗಳ ಪ್ರದರ್ಶನ ನೀಡಿ ಪ್ರಶಸ್ತಿ ಬಾಚಿಕೊಂಡಿದ್ದರು. ತಮ್ಮ ಮುಂದಿನ ಗುರಿಯತ್ತ ಮುಖ ಮಾಡಿದ್ದರು.
ಈಗ ಸಾರ್ವಜನಿಕರು ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಲಾಕ್ಡೌನ್ ಆಗದಂತೆ ನೋಡಿಕೊಳ್ಳಿ ಎಂದು ಸರ್ಕಾರ ಮನವಿ ಮಾಡಿದೆ. ಕೇಸ್‌ಗಳು ಕಡಿಮೆಯಾದ್ರೇ ಮತ್ತೆ ತಮ್ಮ ಫ್ಯಾಷನ್ ಲೋಕ ರಂಗಾಗಲಿದೆ. ಇಲ್ಲದಿಂದ ಈಗಿನಂತೆ ಮತ್ತೆ ಮಂಕು ಆವರಿಸಲಿದೆ.
ಇದನ್ನೂ ಓದಿ: ದೇವರ ಜಗುಲಿಯಲ್ಲಿ ಶಾಸಕನ ಮೊಬೈಲ್ ಫೋಟೋಗೆ ಪೂಜೆ : ಮಂತ್ರಿಯಾಗಲೆಂದು ಹರಕೆ ಹೊತ್ತ ಅಭಿಮಾನಿ