ETV Bharat / city

ದೆಹಲಿ ಭೇಟಿ ಬಗ್ಗೆ ಶಾಸಕ ಅರವಿಂದ್​ ಬೆಲ್ಲದ್ ಸ್ಪಷ್ಟನೆ ಹೀಗಿದೆ.. - MLA Arvind Bellad in Delhi

ನಾನು ನಿನ್ನೆ ಎನ್‌ಜಿಒವೊಂದರ ಕಾರ್ಯಕ್ರಮದ ಸಲುವಾಗಿ ದೆಹಲಿಗೆ ಹೋಗಿದ್ದೆ ಎಂದು ಶಾಸಕ ಅರವಿಂದ್​ ಬೆಲ್ಲದ್​ ಸ್ಪಷ್ಟಪಡಿಸಿದ್ದಾರೆ.

MLA Arvind Bellad talk about his Delhi visit
ಶಾಸಕ ಅರವಿಂದ್​ ಬೆಲ್ಲದ್
author img

By

Published : Apr 7, 2022, 1:30 PM IST

Updated : Apr 7, 2022, 2:59 PM IST

ಧಾರವಾಡ: ಶಾಸಕ ಅರವಿಂದ್​ ಬೆಲ್ಲದ್​ ದೆಹಲಿಗೆ ಭೇಟಿ ನೀಡಿದ್ದರು. ಸಿಎಂ ಬೊಮ್ಮಾಯಿ ದೆಹಲಿ ಭೇಟಿ ಬಳಿಕ ಬೆಲ್ಲದ್​ ದೆಹಲಿ ಭೇಟಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸ್ವತಃ ಅರವಿಂದ್​ ಬೆಲ್ಲದ್ ಅವರೇ​ ಸ್ಪಷ್ಟನೆ ನೀಡಿದ್ದಾರೆ.

ಶಾಸಕ ಅರವಿಂದ್​ ಬೆಲ್ಲದ್​

ಇದನ್ನೂ ಓದಿ: ಬೆಳಗಾವಿ ಆರ್‌ಎಸ್ಎಸ್ ಕಚೇರಿಗೆ ಗೋವಾ ಸಿಎಂ ಭೇಟಿ.. ಮತ್ತೊಮ್ಮೆ ಮೋದಿ ಪ್ರಧಾನಿ ಆಗ್ತಾರೆ ಎಂದ ಸಾವಂತ್

ನಾನು ನಿನ್ನೆ ದೆಹಲಿಗೆ ಹೋಗಿದ್ದೆ. ಎನ್‌ಜಿಒವೊಂದರ ಕಾರ್ಯಕ್ರಮಕ್ಕೆ ತೆರಳಿದ್ದೆ. ಒಂದು ಚಿಂತಕರ ಕೂಟದ ಕಾರ್ಯಕ್ರಮ ಅದಾಗಿತ್ತು. ಅದು ಸರ್ಕಾರಕ್ಕೆ ವಿವಿಧ ಚಿಂತನೆಗಳನ್ನು ತಿಳಿಸುವ ಸಂಸ್ಥೆ. ಆ ಸಂಸ್ಥೆಯ ಉದ್ಘಾಟನೆ ಬುಧವಾರ ಇತ್ತು.

ಕಾರ್ಯಕ್ರಮದಲ್ಲಿ ನಾನು ಅತಿಥಿಯಾಗಿದ್ದೆ. ಈ ಕಾರಣಕ್ಕೆ ನಾನು ದೆಹಲಿಗೆ ಹೋಗಿದ್ದೆ ಎಂದು ಮಾಧ್ಯಮದವರಿಗೆ ಶಾಸಕ ಬೆಲ್ಲದ್​ ಉತ್ತರಿಸಿದರು. ಬೆಂಗಳೂರು ಯುವಕ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಂತಕರಿಗೆ ಕಠೋರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

Last Updated : Apr 7, 2022, 2:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.