ಹುಬ್ಬಳ್ಳಿ: ಕಲಘಟಗಿ ಪಟ್ಟಣದ ಬಸ್ ನಿಲ್ದಾಣವೊಂದರ ಸಾರಿಗೆ ನಿಯಂತ್ರಕರ ಕಚೇರಿಯಲ್ಲಿಯೇ ಅಧಿಕಾರಿ ನೇಣಿಗೆ ಶರಣಾಗಿದ್ದಾರೆ.

ಪಟ್ಟಣದ ಬುಲಬುಲೆ ಬಸ್ ನಿಲ್ದಾಣದ ನಿಯಂತ್ರಕ ಅಧಿಕಾರಿಯು ಕಚೇರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕಲಘಟಗಿ ಠಾಣೆಯ ಪ್ರಭಾರಿ ಇನ್ಸ್ಪೆಕ್ಟರ್ ಜಯಪಾಲ ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶವವನ್ನು ಕಲಘಟಗಿ ಆಸ್ಪತ್ರೆಗೆ ರವಾನಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಯುಪಿಎಸ್ ಬ್ಯಾಟರಿಯಲ್ಲಿ ಕಾಣಿಸಿಕೊಂಡ ಬೆಂಕಿ: ಮನೆ ಕಾಂಪೌಂಡ್ನಲ್ಲಿದ್ದ ಕಾರು ಕರಕಲು