ETV Bharat / city

ಇನ್ಫೋಸಿಸ್ ವತಿನಿಂದ ಹುಬ್ಬಳ್ಳಿಯಲ್ಲಿ 2,800 ಪೌರಕಾರ್ಮಿಕರಿಗೆ ದಿನಸಿ ಕಿಟ್​ ವಿತರಣೆ - ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿ

ಇನ್ಫೋಸಿಸ್ ಫೌಂಡೇಶನ್​ನ ಅಮೋಲ್ ಕುಲಕರ್ಣಿ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 2,800 ಜನರಿಗೆ ಆಹಾರ ಪದಾರ್ಥಗಳ ಕಿಟ್​ಗಳನ್ನ ಹಸ್ತಾಂತರಿಸಿದ್ದಾರೆ.

Infosys Gave Food Kit for 2,800 civilians
ಇನ್ಫೋಸಿಸ್ ವತಿನಿಂದ 2,800 ಪೌರಕಾರ್ಮಿಕರಿಗೆ ಆಹಾರದ ಕಿಟ್
author img

By

Published : Apr 25, 2020, 3:04 PM IST

ಹುಬ್ಬಳ್ಳಿ: ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 2,800 ಪೌರಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್​ ವಿತರಿಸಲಾಯಿತು.

Infosys Gave Food Kit for 2,800 civilians
ಇನ್ಫೋಸಿಸ್ ವತಿನಿಂದ 2,800 ಪೌರಕಾರ್ಮಿಕರಿಗೆ ದಿನಸಿ ಕಿಟ್

ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಸ್ವಚ್ಛತಾ ಸೇನಾನಿಗಳಂತೆ ಕಾರ್ಯನಿರ್ವಹಿಸುತ್ತಿರುವ ಪಾಲಿಕೆಯ ಪೌರಕಾರ್ಮಿಕರು, ಆಟೋ-ಟಿಪ್ಪರ್ ಚಾಲಕರು, ಟ್ರ್ಯಾಕ್ಟರ್ ಡ್ರೈವರ್​ಗಳು, ಲೋಡರ್ಸ್, ಜೆಟ್ಟಿಂಗ್ ಯಂತ್ರದ ಸಿಬ್ಬಂದಿಗೆ ಆಹಾರ ಸಾಮಗ್ರಿಗಳನ್ನ ವಲಯವಾರು ವಿತರಿಸಲಾಯಿತು. 2800 ಆಹಾರ ಪದಾರ್ಥಗಳ ಕಿಟ್​ಗಳನ್ನ ಪಾಲಿಕೆಯ ಆಯುಕ್ತ ಡಾ. ಸುರೇಶ್​​ ಬಿ. ಇಟ್ನಾಳ ಅವರಿಗೆ ಇನ್ಫೋಸಿಸ್ ಫೌಂಡೇಶನ್​ನ ಅಮೋಲ್ ಕುಲಕರ್ಣಿ ಹಸ್ತಾಂತರಿಸಿದರು. ಇನ್ಫೋಸಿಸ್ ಫೌಂಡೇಶನ್ ಸಮಾಜಮುಖಿ ಕಾರ್ಯಗಳನ್ನ ಪಾಲಿಕೆಯ ಆಯುಕ್ತರು ಶ್ಲಾಘಿಸಿದರು.

ಈ ಕಿಟ್ 5 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ, 1 ಲೀಟರ್ ಎಣ್ಣೆ, ಮಸಾಲೆ ಪದಾರ್ಥಗಳು, ಅರ್ಧ ಕೆಜಿ ಕಡಲೆ ಬೇಳೆ ಸೇರಿದಂತೆ ಹತ್ತು ಪದಾರ್ಥಗಳನ್ನ ಒಳಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.