ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆ ಬುಧವಾರ ವ್ಯಕ್ತಿವೋರ್ವನನ್ನು 12 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಒಂದೇ ದಿನದಲ್ಲಿ ಭೇದಿಸಿದ್ದಾರೆ. ಪ್ರಕರಣದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಕಸಬಾಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಾಕುವಿನಿಂದ 12 ಬಾರಿ ಇರಿದು ಬರ್ಬರವಾಗಿ ಕೊಲೆಗೈದ ಪಾಪಿಗಳು...
ನಿನ್ನೆ ಹಳೇ ಹುಬ್ಬಳ್ಳಿಯ ಪಠಾಣ ಗಲ್ಲಿಯಲ್ಲಿನ ಶಾಬುದ್ದೀನ ಎಂಬಾತನನ್ನು 12 ಬಾರಿ ಚಾಕಿವಿನಿಂದ ಇರಿದು ಹತ್ಯೆಗೈಯಲಾಗಿತ್ತು. ಸದರಸೋಫಾ ನಿವಾಸಿ ಶಂಶುದ್ದೀನ್ ಸವಣೂರ ಹಾಗೂ ಜುಬೇರ ಅಹ್ಮದ ಹಾಜಿ ಕಲಬುರ್ಗಿ ಬಂಧಿತರು. ಹಳೇ ವೈಷಮ್ಯದಿಂದ ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಇನ್ಸ್‌ಪೆಕ್ಟರ್ ಶ್ಯಾಮರಾಜ್ ಸಜ್ಜನ್ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.