ETV Bharat / city

ಬಸ್​​ನಲ್ಲಿ ಪ್ರಯಾಣಿಕರ ಜೇಬಿಗೆ ಕನ್ನ ಹಾಕುತ್ತಿದ್ದ ಐವರು ಕಳ್ಳಿಯರು ಅಂದರ್!​ - hubballi news

ಪ್ರಯಾಣಿಕರಂತೆ ನಟಿಸಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ಐವರು ಮಹಿಳೆಯರು ಪ್ರಯಾಣಿಕರಿಗೆ ಅರಿವಾಗದ ಹಾಗೆ ಕಳ್ಳತನ ನಡೆಸುತ್ತಿದ್ದರು. ಇದೀಗ ಕಳ್ಳಿಯರ ಬಂಧಿಸುವಲ್ಲಿ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಮಹಿಳೆಯರಿಂದ 20 ಗ್ರಾಂ ಚಿನ್ನ, 1 ಗ್ರಾಂ ತೂಕದ 16 ಚಿನ್ನದ ಗುಂಡುಗಳು ಹಾಗೂ 1,860 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.

Five women  robbers arrested those robbed Passengers in Bus
ಬಸ್​​ನಲ್ಲಿ ಪ್ರಯಾಣಿಕರ ಜೇಬಿಗೆ ಕನ್ನ ಹಾಕುತ್ತಿದ್ದ ಐವರು ಕಳ್ಳಿಯರು ಅಂದರ್​
author img

By

Published : Mar 2, 2021, 9:32 PM IST

ಹುಬ್ಬಳ್ಳಿ: ಬಸ್​​ಗಳಲ್ಲಿ ಪ್ರಯಾಣಿಕರ ಜೇಬು ಹಾಗೂ ಬ್ಯಾಗ್​​​​​​ಗಳಿಗೆ ಕತ್ತರಿ ಹಾಕಿ ಹಣ ಎಗರಿಸುತ್ತಿದ್ದ ಐವರು ಮಹಿಳೆಯವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಯಾಣಿಕರಂತೆ ನಟಿಸಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ಐವರು ಮಹಿಳೆಯರು ಪ್ರಯಾಣಿಕರಿಗೆ ಅರಿವಾಗದ ಹಾಗೆ ಕಳ್ಳತನ ಮಾಡುತ್ತಿದ್ದರು.

ಇದೀಗ ಕಳ್ಳಿಯರ ಬಂಧಿಸುವಲ್ಲಿ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಮಹಿಳೆಯರಿಂದ 20 ಗ್ರಾಂ ತೂಕದ ಚಿನ್ನ, 1ಗ್ರಾಂ ತೂಕದ 16 ಚಿನ್ನದ ಗುಂಡುಗಳು ಹಾಗೂ 1,860 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.

ಒಂಧಿತರನ್ನು ಪಲ್ಲವಿ ಚಂದ್ರಶೇಖರ ಭಜಂತ್ರಿ, ಆಸ್ಮಾ ಮಹ್ಮದರಫೀಕ ಗದಗ, ಕೊಳದವ್ವ ಅಲಿಯಾಸ್ ಕೊಳಲಿ ಆಂಜನೇಯ ತವರಗೊಪ್ಪ, ಯಲ್ಲಮ್ಮ ಬಸವರಾಜ ಕೊಟುಗಣಸಿ ಹಾಗೂ ಪ್ರೇಮಾ ಅಲಿಯಾಸ್ ಪಾರಿಜಾತ ಅಣ್ಣಪ್ಪ ಭಜಂತ್ರಿ ಎಂದು ಗುರುತಿಸಲಾಗಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಹರ ಠಾಣೆ ಇನ್ಸ್​ಪೆಕ್ಟರ್ ಆನಂದ ಒನಕುದ್ರೆ, ಮಹಿಳಾ ಪಿಎಸ್ಐ ಪದ್ಮಮ್ಮ ಹಾಗೂ ಸಿಬ್ಬಂದಿ ಮಹಿಳಾ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕುಂದಾ ಜೊತೆ ಕರದಂಟು ಚನ್ನಾಗಿರುತ್ತೆ ಎಂಬ ಹೆಬ್ಬಾಳ್ಕರ್ ಹೇಳಿಕೆಗೆ ಸತೀಶ್ ಜಾರಕಿಹೊಳಿ‌ ಹಾಸ್ಯಚಟಾಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.