ಹುಬ್ಬಳ್ಳಿ: ನಗರದ ಹಳೆ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು, ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್ (ಸರಕು ಸಾಗಣೆ) ಆಗಿ ಪರಿವರ್ತನೆ ಮಾಡಲಾಗಿದ್ದು, ದೇಶದ ವಿವಿಧೆಡೆ ವ್ಯಾಪಾರ ವಹಿವಾಟು ಸಂಪರ್ಕಕ್ಕೆ ಮತ್ತಷ್ಟು ಬೆಸುಗೆ ಬೆಸೆದಂತಾಗಿದೆ.
ಈಗಾಗಲೇ ಇದಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಅನುಮೋದನೆ ನೀಡಿದೆ. ಇದರ ಕಾಮಗಾರಿ ಭರದಿಂದ ಸಾಗಿದ್ದು, ಜನವರಿ ಇಲ್ಲವೇ ಫೆಬ್ರವರಿಯಲ್ಲಿ ಕಾರ್ಯಾರಂಭಗೊಳ್ಳುವ ನಿರೀಕ್ಷೆಗಳಿವೆ. ವಿಮಾನ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜೊತೆಗೆ ಸರಕು ಸಾಗಾಟವೂ ಹೆಚ್ಚಳವಾಗುತ್ತಿದೆ. ನಗರದಲ್ಲಿ ನಿರ್ಮಿಸಲಾಗುತ್ತಿರುವ ಟರ್ಮಿನಲ್‌ಗೆ ಎರಡು ದಿನಗಳ ಹಿಂದೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಅಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿದ್ದಾರೆ.
ಓದಿ-ಹುಬ್ಬಳ್ಳಿ: ತುರ್ತು ಸ್ಪಂದನ ವ್ಯವಸ್ಥೆ112 ಚಾಲನೆ
ಕಾರ್ಗೋ ನಿಲ್ದಾಣಕ್ಕೆ ಅವಶ್ಯಕವಾದ ಮೂಲ ಸೌಕರ್ಯಗಳು ಹಾಗೂ ಭದ್ರತಾ ಪಡೆಯನ್ನು ಸಹ ಒದಗಿಸಲಾಗಿದೆ. ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್‌ನ ನಿರ್ವಹಣೆ 3+4 ಬೇಸ್‌ಗಳಲ್ಲಿ ಸಿದ್ಧಗೊಳ್ಳುತ್ತಿದೆ. ಈ ಟರ್ಮಿನಲ್‌ದಲ್ಲಿ ಮೂರು ದೊಡ್ಡ ಕಾರ್ಗೋ ವಿಮಾನಗಳು ಹಾಗೂ ನಾಲ್ಕು ಚಿಕ್ಕ ಕಾರ್ಗೋ ವಿಮಾನಗಳ ನಿಲುಗಡೆಯಾಗಲಿವೆ.